

photo_ chat gpt
ಮತ್ತೆ ಮಳೆಯಾಗಿದೆ
ಎದೆಯೊಳಗೆ….
ಹಸಿಯಾಗಿದೆ,
ಹಸುರಾಗಿದೆ
ಹಸನಾಗಿದೆ
ಒಪ್ಪ ಒಸುಗೆಯ
ಬೆಸುಗುಗೈದಿದೆ
ಒಲವುಟ್ಟಿದೆ
ಕಳೆಕಟ್ಟಿದೆ
ಸಲುಗೆಯ ಪ್ರೀತಿಯೊಳಗೆ.
ಕಣ್ಮನಗಳಿಗೆ ತನಿವಾಗಿದೆ
ಕರುಳಿಗಿತವಾಗಿದೆ
ಅರಿಯದ ಅರ್ತಿಯು
ಪ್ರೇಮದ ಮೂರ್ತಿಯಾಗಿ
ಹೂಮಳೆಯಲ್ಲಿ ತೊಯ್ದಾಡಿದೆ
ಹೊಯ್ದಾಡಿದೆ ತೇಲಾಡಿದೆ
ಭಾವದ ತೊಟ್ಟಿಲು
ಜೋಕಾಲಿಯಲಿ ಜೀಕಾಡಿದೆ
ಗೊಂದಲದ ಪ್ರೀತಿಯೂ
ನೇತಾಡಿ ನೈಜವಾಗಿದೆ.
ಒಲವಿನ ಒಲುಮೆಗೆ
ಪರವಶನಾದೆನು ನಾನು
ಅನುಕ್ಷಣ ಅನುದಿನ
ಅನುರಣದೊಳಗಿನ
ಅನುರಾಗದ ಆಲಾಪದಲ್ಲಿ
ಭಾವಬಂಧುರವು
ಕಾವಮಂದಿರವಾಗಿದೆ
ಒಲವ ಸಖಂಧರೆಯ
ಕಂಡ ಆ ಕ್ಷಣವೇ …..
ಮಳೆಯ ತುಂತುರು
ಎದೆಯೊಳಗೆ ,
ಹಕ್ಕಿಗಳು ರೆಕ್ಕೆ ಪುಕ್ಕ
ಬಿಚ್ಚುವಂತೆ ಬಾಂದಳದೊಳಗೆ,
ಪ್ರೀತಿಯೇ ನಾಚುವಂತೆ
ಫಸಲು ಫಲಿತವಾಗಿದೆ
ಎದೆಗೂಡಿನಲ್ಲಿ ಎವೆತೆರೆದ
ಪ್ರೇಮಜೀವಗಳು
ಜೋಡಿಯಾಗಿವೆ
ಹಿತವಾಗಿ ಮಿಳಿತವಾಗಿವೆ.
ಮತ್ತೆ ಮಳೆಯಾಗಿದೆ …..
ಪ್ರಿಯೆಯ ಮೌನದ ಮಾತಿನ
ಆಲಿಕಲ್ಲುಗಳು ಕರಗಿವೆ
ಒಳಗೊಳಗೆ ಎನ್ನದೆಯೊಳಗೆ,
ಸೀರ್ಫಾನಿಯ ಸೋಂಕು
ಚಿಮ್ಮಿದೆ ಮನದೊಳಗೆ,
ತನನಂ ತನನಂ ನಾದದ
ಗಾನವು ಲಹರಿಯಾಗಿದೆ,
ಕಣ್ಗಳು ಕೂಡಿ ಮಾತುಗಳೋಡಿ
ಬೆರಳುಗಳು ಬಿಗಿದು
ಭಾವದಂಗಳವು ಬಿಸಿಯಾಗಿದೆ
ಪ್ರೇಮದ ಸ್ಪರ್ಶಸೇತುವೆಯೂ
ಹಿತ ಮಿತ ಸ್ಮಿತವಾಗಿ
ಹಸಿರ್ ಬೆಳೆಗಳು ಬೀಗಿ
ಪ್ರೇಮದ ವಸಂತಾವತಾರಕ್ಕೆ
ಶರಣೆಂದು ಶಿರಬಾಗಿವೆ
ಮತ್ತೆ ಮತ್ತೆ ಪ್ರೇಮಕ್ಕೆ
ಎದೆಯರಳಿಸಿ ನಮಿಸಿವೆ.
ತಾತಪ್ಪ.ಕೆ.ಉತ್ತಂಗಿ




Super sir
ತುಂಬಾ ಚೆನ್ನಾಗಿದೆ ಸರ್ ಒಂದೊಂದು ಸಾಲು ಅರ್ಥಗರ್ಭಿತವಾಗಿದೆ ಸರ್
Fantastic sir ♥️
Nice
Thumbha channagide sir.. Hige munduvareyali nimma kaviteya payana
ಸೂಪರ್ ಸರ್ ❤️
ತುಂಬಾ ಅರ್ಥಗರ್ಭಿತವಾದ ಕವಿತೆ ಸರ್
ವರ್ಣಿಸಲು ಪದಗಳೇ ಸಾಲವು ಸರ್ ಹಾಗೆ ಒಂದೊಂದು ಪದವು ಕೂಡ ಮನಮುಟ್ಟುವಂತಿದೆ ಸರ್ superb ಸರ್
ಭಾವ ಸ್ಪಂದನದ ಕವಿತೆ ತುಂಬಾ ಚೆನ್ನಾಗಿದೆ
ಸೂಪರ್ ಅಣ್ಣ
❤️ತುಂಬಾ ಅರ್ಥಗರ್ಭಿತವಾದ ಪದಗಳ ಸಾಲುಗಳು ತುಂಬಾ ಚೆನ್ನಾಗಿದೆ ಗುರುಗಳೇ ❤️
ಅರ್ಥಪೂರ್ಣ ಪದಗಳು Brother
Benki sir✨
Thumba change edy sir
ಮಳೆಯ ಸುಂದರವನ್ನು ಬಹಳ ಅರ್ಥಪೂರ್ಣ ವಾಕ್ಯಗಳಿಂದ ಸುಂದರವಾಗಿ ರಚಿಸಿದ್ದೀರಿ ಸರ್
ಸೂಪರ್ ಸರ್
ತುಂಬಾ ಸುಂದರ ಕವಿತೆ ,