ಕಥಾ ಸಂಗಾತಿ
ʼಪ್ರೇಮಾʼ
ಸವಿತಾ ದೇಶಮುಖ

ವಿಸ್ಮಯಗೊಂಡ ಕಂಗಳಲಿ ಪ್ರಮೋದನು ಹೋದ ದಾರಿಯನ್ನೇ ರೆಪ್ಪೆ ಬಡಿಯದೆ ‘ಪ್ರೇಮಾ’ ನೋಡುತ ನಿಂತಳು ……ಹೊರಗಡೆ ಕತ್ತಲೆ ಕವಿಯುತ್ತಿತ್ತು…. ಅಂದಕಾರದ ಮುಷ್ಟಿಯು ಬಿಗಿದಂತಾಯಿತು…. ಸಿಟ್ಟು- ತಾತ್ಸಾರ -ಸೇಡುಗಳು ಜ್ವಾಲೆ ಹತ್ತಿ ಉರಿಯಹತ್ತಿದವು……ಇನ್ನೊಂದಡೆ ಕಂಗೆಟ್ಟ ಬಡತನ- ನಿರ್ಗತಿಕತೆ -ನ್ಸಿಹಾಯ ಅಬಲೆತನವು ಆ ಉರಿಯನ್ನು ಅಲ್ಲಿಯೇ ನಂದಿಸಿ ಬಿಡುವ ಸತತ ಪ್ರಯತ್ನದಲ್ಲಿ ತೊಡಗಿದ್ದವು…..!!! ಅವುಗಳ ಯುದ್ಧದ ನಡುವೆ ಪ್ರೇಮ ಸೋಲುವಂತೆಯೂ ಇಲ್ಲ ಗೆಲ್ಲುವಂತೆಯೂ ಇಲ್ಲ.
ಪ್ರೇಮ 32 ವರ್ಷಗಳ ಕರಾಳ ದಿನಗಳನ್ನು ಕಳೆದಳು. ಮಮತೆ ಪ್ರೇಮ ಪ್ರೀತಿಗಾಗಿ ಹಾತೋರಿಯುತ್ತ ಕಳೆದ ದಿನಗಳು… ಪ್ರಮೋದನ ಬರುವ ಜೀವನದಲ್ಲಿ ಆಸೆ ತುಂಬಿತ್ತು. ಆದರೆ ಈಗ ಅವನು ತನ್ನ ಬಾಳಿನಿಂದ ಹೊರಟು ಹೋಗಿದ್ದ ಎಲ್ಲ ಸುಂದರ ಕನಸುಗಳನ್ನು ಹೊತ್ತು ಬಲು ದೂರ ಹೋಗಿದ್ದ .
ಪ್ರೇಮ ಹುಟ್ಟುತ್ತಲೇ ತಾಯಿ ಕಳೆದುಕೊಂಡು ತಬ್ಬಲಿ ಮುಂದೆ ಮಲತಾಯಿಯ ತಾರತಮ್ಯದ ಮಧ್ಯ ನೊಂದ ಬೆಳವಣಿಗೆಯಾಯಿತು. ತಂದೆ ತಾನು ತಾಯಿ ಇಲ್ಲದ ಮಗುವೆಂದು ಹೆಚ್ಚು ಹೆಚ್ಚು ಅಕ್ಕರೆಯಿಂದಲೇ ನೋಡುತ್ತಿದ್ದರು .ಅವನ ಆರ್ಥಿಕ ಪರಿಸ್ಥಿತಿ ಅಷ್ಟಕ್ಕಷ್ಟೇ ಇದ್ದ ಕಾರಣ ಅವಳು ಕೇಳುತ್ತಿದ್ದ ಯಾವ ವಸ್ತುಗಳನ್ನು ತಂದು ಕೊಡಲಾಗದೆ ಪರಿದಾಡುತ್ತಿದ್ದ. ಆದರೆ ತಂದೆಯ ಮಮತೆಯ ಆಸರೆಯ ಭಾಗ್ಯ ಅವಳಿಗೆ ಬಹಳ ಕಾಲ ಒದಗಿ ಬರಲಿಲ್ಲ.
ಅಂದು ಶಿವರಾತ್ರಿ ದಿನ ತಂದೆ “ಎಷ್ಟೊತ್ತಾದರೂ ಯಾಕಮ್ಮ ಅಪ್ಪ ಮನೆಗೆ ಬರಲಿಲ್ಲ “….ಅಂತ ತೊದಲು ನುಡಿಗಳಿಂದ ಮಲತಾಯಿಯನ್ನು ಉಸಿರು ಬಿಡದೆ ಕೇಳಿದಳು ….!!!ಸಿಡಿಮಿಡಿಗೊಂಡ ತಾಯಿ “ಎಲ್ಲಿಗೆ ಹೋಗ್ತಾರೆ ಹಾಳಾಗೋಕೆ ಬಂದೇ ಬರ್ತಾರೆ ನೀನು ಸುಮ್ನೆ ಮೂಲೆಯಲ್ಲಿ ಕುಳಿತಿರು ನನಗೆ ಪೂಜೆ ಮುಗಿಸಿ ಬೇಕಿದೆ” ಎಂದು ಗದರಿಸಿದಳು.
ಅದು ನಿಜವೇನು ಎಂದು ತನ್ನ ಪುಟ್ಟ ಪಾದಗಳನ್ನು ಹೊತ್ತು ಲಘುಬಗೆಯಿಂದ ಮೂಲೆ ಹಿಡಿದಳು. ಹೊರಗೆ ಯಾರೋ ಬಂದ ಸದ್ದು ಕೇಳಿಸಿತು ಓಡಿ ಹೋಗಿ ನೋಡಿದಳು ತಂದೆಯನು ನಾಲ್ಕು ಜನ ಹೊತ್ತು ತಂದ ದೃಶ್ಯ ನೋಡಿ ಮುಖ ಕಂದು ಗಟ್ಟಿತು.ಸಾವು ಎಂದರೇನು ಅರಿಯದ ಪ್ರೇಮನಿಗೆ ಕೈ ಕಾಲು ನಡಗಿತು ಮಾತನಾಡದ ತಂದೆಯ ನೋಡಿ ಅಲ್ಲಿಯೇ ಮೂರ್ಛೆ ಹೋದಳು. ಅವಳು ಎಚ್ಚೆತ್ತು ಮರಳಿ ಈ ಜಗತ್ತು ಸೇರುವದರಲ್ಲಿ ತಂದೆಯೂ ಇಲ್ಲ ಅವನ ದೇಹವು ಇಲ್ಲ ಎದುರಿಗೆ ಅವನ ಫೋಟೋದ ಮೇಲೆ ದೊಡ್ಡದೊಂದು ಹಾರಹಾಕಲಾಗಿತ್ತು.ಎದ್ದವಳೇ
“ಅಮ್ಮ ಅಪ್ಪ ಎಲ್ಲಿ ಎಂದಳು”ಆಂತಕದಿಂದ
” ಎಲ್ಲಿ ನಿನ್ನ ಕೆಟ್ಟ ಹಣೆಬರದಿಂದ ಎಲ್ಲರನ್ನು ನುಂಗುತಾ ಇದೀಯಾ ಇನ್ನು ನನ್ನನ್ನು ನುಂಗದೆ ನೀನು ಬಿಡಲಾರೆ “ಎಂದು ಜೋರಾಗಿ ತಾಯಿ ಅಳಲಾರಂಭಿಸಿದಳು. ತಾಯಿಯ ಯಾವ ಮಾತನ್ನು ಅರ್ಥೈಸಲಾಗಲಿಲ್ಲ ಪ್ರೇಮಳಿಗೆ ..
ಸತ್ತ ತಂದೆ ಕುಟುಂಬದ ಸೊಂಟ ಮುರಿದು ಹೋಗಿದ್ದ.ಎರಡು ಎಕರೆಯಲ್ಲಿ ತಾಯಿಗೆ ಮನೆ ನಡೆಸುವುದು ಬಹಳ ಕಷ್ಟವಾಗಲಾರಂಭಿಸಿತು…
ತಾಯಿ ನ್ಸಿಸಾಹಯಕಳಾದಂತೆ ಅವಳ ಸಿಡುಕುತನ ಹೆಚ್ಚಾಗುತ್ತಾ ಹೋಯಿತು. ಎಲ್ಲ ಸಿಟ್ಟು ಪ್ರೇಮಾಳಿಗೆ ಒಂದೆರಡು ಹೊಡೆದು ಬೈದು ತೀರಿಸಿಕೊಳ್ಳುತ್ತಿದ್ದಳು. ಅವಳಿಗೆ ತನ್ನ ಮಗ ‘ರಾಜು’ ಎಂದರೆ ಬಲು ಪ್ರೀತಿ ಅವನ ಮೇಲೆ ಎಂದು ರೇಗಿದವಳಲ್ಲ ಮಗನೆಂದರೆ ಆಂಶದ ಕುಡಿ ಅವನಿಂದಲೇ ಮನೆ ಬೆಳಗುವುದು ಎನ್ನುವ ಭ್ರಮೆ. ತಾಯಿಯ ಮೋಹದಲಿ ಬೆಳೆಯುತ್ತಾ ಬಂದ ರಾಜುವಿಗೆ ಮನೆ ಜವಾಬ್ದಾರಿ ಎಂದರೇನು ಮನೆಯ ಆಗುಹೋಗಗಳ ಚಿಂತೆ ಇರಲಿಲ್ಲ. ತಾಯಿಗೆ ಅವನನ್ನು ತುಂಬಾ ಕಲಿಸಬೇಕೆನ್ನುವ ಚಪಲ. ಅವನು ಮಾತ್ರ ಶಾಲೆ ಎಂದರೆ ಅನಹರ್ಯರು ಮಾಡುವ ಕೆಲಸ ಎನ್ನುತ್ತಿದ್ದ. ಎಸ್ ಎಸ್ ಎಲ್ ಸಿ ಆದ ಕೂಡಲೇ ಇನ್ನು ಮುಂದೆ ನನಗೆ ಕಲೆಯಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ.
ಪ್ರೇಮ ಬುದ್ಧಿವಂತೆ.. ಎಲ್ಲ ಕಲೆಗಳಲ್ಲಿ ಪರಿಣಿತಳು ಆಗಿದ್ದರೂ ಅವಳನ್ನು ಮುಂದೆ ಕಲಿಸಲು ಸಾಧ್ಯವಿಲ್ಲವೆಂದು ಅವಳಾಸೆಯ ಬಳ್ಳಿಯನ್ನು ಚೂವುಟಿ ಸಿರಿವಂತ ಮುದಿಯನ್ನು ನೋಡಿ ಗಂಟು ಹಾಕಿ ಬಿಟ್ಟಳು ಮಲತಾಯಿ..ಅಂಥ ಸುಂದರಿಯಲ್ಲದ ಪ್ರೇಮ ತಿಳಿ ಕಂದು ಬಣ್ಣ ತೆಳ್ಳನೆಯ ದೇಹ ಅವಳ ಸುಂದರವಾದ ಕಣ್ಣುಗಳು ಹಾಗೂ ಉದ್ದನೆ ಹಾವಿನಂತೆ ಹರಿದಾಡುವ ಜಡೆಯು ಅವಳನ್ನು ಸುಂದರಿಮನ್ನಾಗಿ ಮಾಡುತ್ತಿತ್ತು.
ಒಲ್ಲದ ಮನಸ್ಸಿನಿಂದ ಗಂಡನ ಮನೆ ಸೇರಿದಳು. ತಾಯಿಯ ಮನೆ ವಾತಾವರಣಕ್ಕಿಂತಲೂ ಅತ್ತೆಯ ಮನೆಯ ವಾತಾವರಣ ಹೆಚ್ಚು ಬೇರೆಯೇನು ಆಗಿರಲಿಲ್ಲ. ಅತ್ತೆಗೆ ಮುದಿತನ ಆವರಿಸುತ್ತಿದ್ದರೂ ಅವಳ ದರ್ಪ ಮಾತ್ರ ಅಡಿಗಿರಲಿಲ್ಲ. ಪ್ರೇಮಾ ಚಿಕ್ಕ ಮಗುವಾದರೂ ಅವಳನ್ನು ಕಾಡಿಸುವುದು ಅವಳ ಹಕ್ಕಾಗಿತ್ತು ಅವಳಿಗೆ ಯಾವಾಗಲೂ ಚಿತ್ರ ಬರೆಯುವುದೆಂದರೆ ಬಲು ಇಷ್ಟ, ಅತ್ತೆ ಆಟಕ್ಕೆ ಹೊರಗೆ ಬಿಡದಿದ್ದರೂ ಮನೆಯಲ್ಲಿಯೇ ಕುಳಿತು ಚಿತ್ರ ಬರೆಯುತ್ತಾ ಕುಡುವಳು…. ಅತ್ತೆ ಬಂದವಳೇ ಅವಳ ಪೆನ್ನನ್ನು ಕಸಿದು ದೂರ ಎಸೆದರೆ.. ಪ್ರೇಮ ಕುಳಿತಲ್ಲಿಂದ ಪೆನ್ನು ಹೋಗಿ ಬೀಳುವ ಸ್ಥಳ ಅದರ ವೇಗವನ್ನು ಎಣಿಸುತ್ತ ಕೇಕೆ ಹಾಕುವಳು, ಅತ್ತೆ ಹೇಳಿದ ಕೆಲಸ ಮಾಡುವ ರೂಢಿಯಾಗಿ ಬಿಟ್ಟಿತ್ತು.ಅವಳಿಗೆ ತನ್ನ ಮನೆ ತಾಯಿಯ ವರ್ತನೆ ಅತ್ತೆಯ ವರ್ತನೆಯಲ್ಲಿ ಅಷ್ಟೇನು ವ್ಯತ್ಯಾಸ ಕಾಣಲಿಲ್ಲ .ಮಮತೆಯೇ ಕಾಣದ ಹಸುಗಳೆಗೆ ವಾತ್ಸಲ್ಯದ ಬೆಗೆ ಹೇಗೆ ತಿಳಿದಿತ್ತು ಅಲ್ವಾ…!! ತನ್ನ ಮುದಿ ಗಂಡನ ವರ್ತನೆ ಅವಳಿಗೆ ಕಿಂಚಿತ್ತು ಹಿಡಿಸುತ್ತಿರಲಿಲ್ಲ.ಒಂದು ದಿನ ರಾತ್ರಿ ಎದ್ದವಳೇ ಮನೆಯಲ್ಲಿ ಯಾರ ಆಜ್ಞೆಯನ್ನು ಪಡೆಯದೆ ತವರು ಮನೆಯ ಬಾಗಿಲು ತಟ್ಟಿದಳು. ಪ್ರೇಮ ಆ ರೀತಿ ಮನೆ ಬಿಟ್ಟು ಓಡಿ ಬಂದದ್ದು ನೋಡಿ ಮಲತಾಯಿಗೆ ಹೊಟ್ಟೆಬೇನೆ ಶುರುವಾಯಿತು. ಪ್ರೇಮ ಮಾತ್ರ ಬಿಕ್ಕಳಿಸುತ “ನಾನು ಈ ಮನೆಯಲ್ಲಿ ಇರ್ತೀನಿ ನಾನು ಅಲ್ಲಿ ಹೋಗೋದಿಲ್ಲ…..” ಅಂತ ಅಳಲಾರಂಭಿಸಿದರು “ಏನಿದು ನಿನ್ನ ಅತ್ತೆ ಮನೆ ಏನು ಇಲ್ಲಿರೋಕೆ ನಿನ್ನ ಅಪ್ಪ ನಿನಗೆ ಏನು ಆಸ್ತಿಪಾಸ್ತಿ ಬಿಟ್ಟು ಹೋಗಿದ್ದಾನೋ ಹೇಗೆ” ಅಂತ ಒದರಾಡಿದರು ಪ್ರೇಮ ಮಾತ್ರ ಸುಮ್ಮನೆ ಒಳಗಡೆ ಹೋದಳು…. ಶಾಲೆಗೆ ಹೋಗಲಾರಂಭಿಸಿದವರು ತಾಯಿಗೆ ಹೇಳುತಿದ್ದಳು ನಾನು ಓದಿ ತುಂಬಾ ದೊಡ್ಡವಳಾಗಿ ನಿಮಗಿಬ್ಬರಿಗೂ ಸಾಕ್ತಿನಮ್ಮ ಅನ್ನುತ್ತಿದ್ದಳು ಹೌದು ಮುಂದೆ.. ಇವಳೇ ನಮಗೆ ಸಾಕುವಳು ಅನ್ನುವುದು ಮಲತಾಯಿ ಅರಿತಿದ್ದಳು ಹೀಗಾಗಿ ತಾಯಿ ಸುಮ್ಮನಿದ್ದಳು …ಹೀಗೆ ಪ್ರಥಮ ದರ್ಜೆಯ ಶ್ರೇಣಿಯಲ್ಲಿ ಉತ್ತೀರ್ಣಳಾಗುತ್ತಾ ಶಿಕ್ಷಕಿಯಾದಳು.ಅವಳನ್ನು ತುಂಬಾ ಓದಿಸು ಒಂದೇ ದೊಡ್ಡ ಆಫೀಸರ್ ಆಗ್ತಾಳೆ ನಿನಗೆ ಕುಳಿತು ಊಟ ಬಡಿಸ್ತಾಳೆ ಅಂತ ಹೇಳಿದ್ದು ಬಹು ಸತ್ಯವಾಯಿತು. ಪ್ರೇಮನನ್ನು ಗಂಡನ ಮನೆಗೆ ಮರಳಿ ಹೋಗಲಿಲ್ಲ.ಹಾಗೆ ಮನೆಯ ಕೆಲಸವನ್ನು ಎಲ್ಲಾ ಇವಳೇ ಮಾಡುವಳುಸಿಕೊಳ್ಳುವುದು ಮುಂದೆ ದುಡ್ಡು ತಂದು ಕೊಡುವಳು….. ಮಗ ಮಾತ್ರ ತಿಂದು ತೇಗುವ ಗೂಳಿಯಂತೆ ಬೆಳೆಯುತ್ತಾ .. ಶಾಲೆಯನ್ನು ಬಿಟ್ಟುಕೊಟ್ಟ. “ನಾನು ಜೀವಂತ ಇರುವ ತನಕ ನೀನು ಯಾವುದರ ಚಿಂತೆ ಮಾಡಬೇಡಪ್ಪ ನೀನು ಮಾತ್ರ ಆರಾಮವಾಗಿ ಇರಬೇಕು “ಅಂತ ತಾಯಿ ಮಗನನ್ನು ಹೇಳುತ್ತಿದ್ದಳು. ಮನೆಯ ಖರ್ಚು ವೆಚ್ಚ ಹೆಚ್ಚುತ್ತಾ ನಡೆಯಿತು ಪ್ರೇಮ ಹೊಲಿಗೆ ಯಂತ್ರವನ್ನು ಕಲಿತಳು ಶಾಲೆ ಮುಗಿಸಿದ ಮೇಲೆ ಎರಡು ಗಂಟೆಯವರೆಗೆ ಹೊಲಿಗೆ ಕೆಲಸ ಮಾಡಲಾರಂಬಭಿಸಿದಳು. ಹೀಗಾಗಿ ಪ್ರೇಮ ಅವರಿಗೆ ಭಾರವೇನು ಅನಿಸಲಿಲ್ಲ …..ಈಗ ಪ್ರೇಮಳೇ ಮನೆಯ ಯಜಮಾನ ಅವಳ ಸಂಬಳದಿಂದ ಮನೆಯ ಖರ್ಚು ನಡೆಯಬೇಕು. ಪ್ರೇಮ ಮಾತ್ರ ತಾಯಿ ಅಣ್ಣನನ್ನು ಎಂದಿಗೂ ಬೇರೆ ಬಗೆಯಲೇ ಇಲ್ಲ ಅವರನ್ನು ಸಲಹುವದ ತನ್ನ ಕರ್ತವ್ಯ ಎಂದು ತಿಳಿದಳು. ತನ್ನ ಮುಂದಿನ ಜೀವನಕ್ಕಾಗಿ ಅಲ್ಪಸ್ವಲ್ಪ ಹಣ ಕೂಡಿರಲು ಆರಂಭಿಸಿದಳು. ತಮ್ಮ ತಾಯಿಯ ವಾತ್ಸಲ್ಯ ಕಾಣದಿದ್ದರೂ ಶಾಲೆಯ ಮಕ್ಕಳಿಗೆ ಅಕ್ಕರೆಯ ಶಿಕ್ಷಕಿ .ಪ್ರೇಮ ಮೇಡಂ ಅಂದರೆ ಅವರಿಗೆ ಪ್ರೇಮದ ಖಣಿ .ಊರಲ್ಲಿ ನಡೆಯುವ ಎಲ್ಲ ಸಭೆ ಸಮಾರಂಭಗಳಲ್ಲೂ ಇವಳ ಓಡಾಟ… ಅತ್ಯಂತ ಮುತ್ಸದ್ದಿತನದಿಂದ ಮುಂದುವರೆಸಿಕೊಂಡು ಹೋಗುವ ಚತುರತೆ ಹೊಂದಿದವಳು.
ಸಣ್ಣ ಹೊಂಡದಲ್ಲಿ ಶಾಂತವಾಗಿ ನಿಂತ ನೀರಂತಿದ್ದು ಪ್ರೇಮಳ ಬದುಕು, ಆ ಹೊಂಡಕ್ಕೆ ಕಲ್ಲೆಸೆದು ರಾಡಿಗೊಳಿಸಿದ ಪ್ರಮೋದ್ ….ಇತನದು ಪ್ರಭಾವ ಬೀರುವ ವ್ಯಕ್ತಿತ್ವದ ವ್ಯಕ್ತಿ ಆ ಮುಖದ ಹಿಂದೆ ಇನ್ನೊಂದು ಕ್ರೂರ ಮುಖ ಅಡಗಿದೆ ಎನ್ನುವುದು ಯಾರು ಅರಿಯಲು ಸಾಧ್ಯವೇ ಇಲ್ಲದಂತ ಮೋಡಿ. ಊರಲ್ಲಿ ನಡೆಯುವ ಎಲ್ಲಾ ಸಭೆ ಸಮಾರಂಭಗಳನ್ನು ಇವನೇ ನಿರ್ವಹಿಸುತ್ತಿದ್ದ ಯಾವುದೇ ವಿಷಯವನ್ನಾಗಲಿ ಅತ್ಯಂತ ಮಾರ್ಮಿಕವಾಗಿ ಚರ್ಚಿಸುತ್ತಿದ್ದ ಮತ್ತು ಪತ್ರಿಕೆಯ ಸ್ಥಳೀಯ ವರದಿಗಾರರು ಕೂಡ ಹೀಗಾಗಿ ಅವನಿಗೆ ಎಲ್ಲರೂ ಚಿರಪರಿಚಿತರು. ಈ ಯುವಕನ ಬಗ್ಗೆ ಪ್ರೇಮಾಳಿಗೆ ಆದರ ಭಾವವಿತು ಆದರೆ ಅವನಾಗಿ ಬಂದು ಪ್ರೇಮವನ್ನು ಅರಿಸಿದ್ದು ಅವಳಿಗೆ ಅಚ್ಚರಿಯ ಮಾತಾಗಿತ್ತು ಬರಡಾದ ಗಿಡಕ್ಕೆ ನೀರು ಸಿಂಚಯಿಸದ ಬಾಸವಾಯಿತು ಪ್ರೇಮ ಅಂತ ಸುಂದರಿಯೂ ಅಲ್ಲ ಮೇಲಾಗಿ ಅವನಿಗಿಂತಲೂ ಮೂರು ನಾಲ್ಕು ವರ್ಷ ದೊಡ್ಡವಳು ಮತ್ತು ನಾನೊಂದು ಸಾಮಾನ್ಯ ಶಿಕ್ಷಕಿ ನನ್ನೇಕೆ ಇವನು ಅರಿಸಿದನೆಂದು ದಿನಗಟ್ಟಲೆ ಲೆಕ್ಕ ಹಾಕಿದಳು ಪ್ರಮೋದನ ಮಾತಿನ ಮೋಡಿಗೆ ಮರಳಾಗಿ ಹೋಗಿದ್ದಳು .ಬಹುಶಃ ಇವನೇ ಪ್ರೀತಿ ಇದೇ ಪ್ರೀತಿ ಇರಬಹುದು ಏನೋ ಅಂತ ನಂಬಿದಳು. ಅವನು ಹೇಳಿದ ಒಂದು ಮಾತನ್ನು ಅಲ್ಲ ಅಲ್ಲಗಳದವಳಲ್ಲ ಅವನ ಸ್ವಾರ್ಥವನ್ನು ಎಲ್ಲ ಪೂರೈಸುತ್ತಾ ಪ್ರೇಮಸಾಗರದಲ್ಲಿ ಮುಳುಗಿಹೋಗಿದ್ದಳು. ಇವರ ವಿಷಯ ಪ್ರೇಮಾಳ ಮಲತಾಯಿಗೆ ತಿಳಿಯಲು ಬಹಳ ಸಮಯವೇನು ಬೇಕಾಗಲಿಲ್ಲ…. ಹೇಗಾದರಾಗಲಿ ಮಗಳಿಗೆ ಗಂಡ ಸಿಕ್ಕನೆಂಬ ಸಂತಸಕ್ಕಿಂತ ತನ್ನ ತಲೆಯ ಮೇಲಿನ ಆಧಾರ ಹೊರಟು ಹೋಗುವದಲ್ಲ ಅನ್ನುವ ಭಯ ಅವಳಿಗೆ ಬಡೆದುಕೊಂಡಿತು ಮಗನ ಮದುವೆಯನ್ನು ಇವಳ ಕೈಯಿಂದಲೇ ಮಾಡಿ ಮುಗಿಸಿಕೊಳ್ಳಬೇಕೆಂದು ಸಮಯ ನೋಡಿ ಮಗನ ಮದುವೆ ವಿಷಯದ ಬಗ್ಗೆ ಪ್ರಸ್ತಾಪಿಸಿದಳು…..”ಅಲ್ಲಿ ಅಮ್ಮ ಅವನು ನಾಲ್ಕು ಕಾಸು ಸಂಪಾದಿಸಲಾರ ಮುಂದೆ ಅವನ ಹೆಂಡತಿ ಮಕ್ಕಳನ್ನು ಯಾರು ಸಾಕುವರು” ಎಂದು ಸಿಟ್ಟಿನಿಂದ ಕೇಳಿದಳು. “ಮದುವೆ ಅಂತ ಆದರೆ ದುಡಿಯಕ್ಕಿ ಶುರು ಮಾಡುತ್ತಾನೆ ಒಂದು ಒಳ್ಳೆಯ ಕನ್ಯಾ ಬಂದಿದೆ “ಅಂತ ಅಂಗಲಾಚಿದಳು. ತಾಯಿಯ ಮಾತಿಗೆ ಇಲ್ಲೇಎನ್ನುಂತಿಲ್ಲ ಪ್ರೇಮನಳಿಗೆ …. ಮದುವೆಯನ್ನು ಮಾಡಿಕೊಟ್ಟಳು…. .
ಇತ್ತ ಪ್ರಮೋದ್ ಪ್ರೇಮ ಇಷ್ಟು ದಿವಸದವರೆಗೂ ಹೂಡಿಟ್ಟ ಹಣವನ್ನು ಸ್ವಲ್ಪ ಸ್ವಲ್ಪವಾಗಿ ಬಳಸುತ್ದ.
ಮೊದಮೊದಲು ಪ್ರಮೋದನು ದುಡ್ಡು ಕೇಳಿದಾಗ ಒಮ್ಮೆಲೇ ಸಂತಸದಿಂದ ಕೊಟ್ಟು ಬಿಡುವಳು ಇತ್ತಿತ್ತಲಾಗಿ ಅವನ ವರ್ತನೆಯಲ್ಲಿ ಬದಲಾವಣೆ ಕಾಣಲು ಆರಂಭಿಸಿದ್ದು ಅವನು ಬರ್ತೀನಿ ಅಂತ ಹೇಳಿದವನು ನಾಲ್ಕು ಎಂಟು ದಿನಗಳವರೆಗೆ ಮಾಯವಾಗಿ ಬಿಡುವ ಸಂಬಳ ಬರುವ ದಿನಗಳ ಆಚೆ ಈಚೆ ಇವಳ ಸುತ್ತಲೂ ಓಡಾಡುವ ಶುರುವಿಟ್ಟ… ಇರಲಿ ಬಿಡು ಎಷ್ಟಾದರೂ ನನ್ನ ಗಂಡ ಆಗುವನಲ್ಲವೇ ಅಂತ ಸಮಾಧಾನ ಪಡುತಿದ್ದಳು .ಎಲ್ಲರಿಗೂ ಇವರು ವಿಷಯ ತಿಳಿದಿತ್ತು ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಮನೆಯಲ್ಲಿ ಬಂದು ಹೋಗುವನು ಅವನಲ್ಲಿ ಪ್ರೇಮಕಿಂತ ದಾಹವೇ ಹೆಚ್ಚಾಗಿ ಕಾಣಿಸುತ್ತಿತ್ತು ಒಂದು ದಿನ ಶಾಲೆಗೆ ಹೋಗುವ ಅದರಲ್ಲಿದ್ದಳು ವಾಂತಿ ಶುರುವಾಯಿತು. ಪ್ರೇಮಳ ಎದೆ ಝಲ್ಲೆಂದಿತು …..!!!!ಯಾರಿಗೂ ತೋರ ಗೊಡದೆ ಓಡುತ್ತಾ ಹೋಗಿ ತನ್ನ ನಾಡಿ ಪರೀಕ್ಷೆ ಮಾಡಲು ಹೇಳಿದಳು ತಾನು ಗರ್ಭವತಿ ಎನ್ನುವುದು ತಿಳಿದು ತಲೆಸುತ್ತಿ ಬಂದಿತು ….ಇದನ್ನು ಮೊದಲು ಪ್ರಮೋದನಿಗೆ ಹೇಳಬೇಕು ಆಮೇಲೆ ಮುಂದಿನ ವಿಚಾರವೆಂದು ಲಘು ಬಗೆಯಿಂದ ಆಟೋ ಏರಿ ಪ್ರಮೋದನ ರೂಮಿಗೆ ತಲುಪಿದಳು.
ರೂಮಿನ ಬಾಗಿಲು ಹಾಕಿದ್ದಿತ್ತು ಬಾಗಿಲು ಬಡಿಯಬೇಕೆಂದು ಸಮೀಪ ಹೋದಳು ಒಳಗಿನಿಂದ ಹೆಣ್ಣಿನ ಕುಲು ಕುಲು ನಗುವ ಸದ್ದು ಕೇಳಿ… ಆಕಾಶವೇ ಕಳಚಿದಂತಾಯಿತು “ಏನಪ್ಪಾ ಶಿವನ ಪೂಜೆಯಲ್ಲಿ ಕರಡಿ ಬಂದ ಹಾಗೆ ಯಾರ್ ಬಂದ್ರು”…. ಅಂತ ಗುಣಗುತ್ತಾ ಬಂದು ಬಾಗಿಲ ತೆಗೆದ ಪ್ರಮೋದ್ ಪ್ರೇಮಳ ನೋಡಿ ಅವನ ಮುಖ ಬಿಳಿಚಿಕೊಂಡಿತ್ತು. ಆದರೂ ಆವರಿಸಿಕೊಂಡು”ಓ ಪ್ರೇಮ ಮೇಡಂ ಬನ್ನಿ ಬನ್ನಿ ಒಳಗೆ ಬನ್ನಿ ಇವಳು ನನ್ನ ಹೆಂಡತಿ “……..!!???ಅಂತ ಅಲ್ಲೇ ಮಂಚದ ಮೇಲೆ ಕುಳಿತ ಸುಂದರಿ ಆತ್ಮೀಯ ಗೆಳತಿ “ಶಾಂತಿ”ಯನ್ನು ತೋರಿದ. ಪ್ರೇಮ ಕಣ್ಣಿಗೆ ಕತ್ತಲೆ ಬಂದು ನೆಲಕ್ಕೆ ಬಿಳಬಹುದೇನು ಅನ್ನುವುದರಲ್ಲಿ ತನ್ನನ್ನು ತಾನು ಆವರಿಸಿಕೊಂಡಳು.. ಪ್ರೇಮಳಿಗೆ ಯಾವುದು ಸತ್ಯ ಯಾವುದು ಮಿಥ್ಯಾ ಅಂತ ತಿಳಿಯಲು ತಡವಾಗಲಿಲ್ಲ ಶಾಂತಿ ಪ್ರೇಮಳ ಪ್ರೀತಿಯ ಗೆಳತಿ ಪ್ರೇಮಲೋಕದಲ್ಲಿ ಶಾಂತಿ ಇರಬೇಕು ಶಾಂತಿ ಇದ್ದಲ್ಲಿ ಪ್ರೇಮಳು ಇರುತ್ತದ್ದಳು ಇಂಥ ಅಚ್ಚು ಮೆಚ್ಚಿನ ಆತ್ಮೀಯ ಗೆಳತಿ ಬೆನ್ನಿಗೆ ಚೂರಿ ಇಟ್ಟಂತಾಯಿತು…… ಭಾವನೆಗಳನ್ನು ತಡೆಯಲಾಗಲಿಲ್ಲ ಅಷ್ಟರಲ್ಲೆ ಶಾಂತಿ ಮುಂದೆ ಬಂದು “ಪ್ರೇಮ ತಾನು ಸತ್ಯ ಮಾತನ್ನು ಹೇಳುತ್ತಿನಿ ನಾನು ಪ್ರಮೋದ್ ಹೋದ ವರ್ಷವೇ ಗುಟ್ಟಾಗಿ ಮದುವೆಯಾಗಿದ್ದೀವು ಆದರೆ ನಿನಗೆ ಹೇಳಲು ಧೈರ್ಯ ಸಾಲಲಿಲ್ಲ ಮೇಲಾಗಿ ನೀನು ಪ್ರಮೋದನನ್ನು ಬಹಳ ಪ್ರೀತಿ ಪ್ರೀತ್ಸೀಯಲ್ಲ ಅದಕ್ಕೆ “”……….ಮುಂದೆ ಹೇಳುವಷ್ಟರಲ್ಲಿ ಪ್ರೇಮ ಅವಳ ಬಾಯಿ ಮುಚ್ಚಿದಳು ಸಾಕು ಮುಂದೆ ಒಂದು ಶಬ್ದವು ಮಾತನಾಡಬೇಡ ಅಂತ ಹೇಳಿ ಭಾರವಾದ ಹೆಜ್ಜೆ ಇಡುತ… ಪ್ರಮೋದನನ್ನು ಒಮ್ಮೆ ದೀರ್ಘವಾಗಿ ನೋಡಿ ಎಂಥ ಮೋಸದ ಮುಖವಾಡವಯ್ಯ ಅಂತ ಮನದಲ್ಲಿ ಅಂದು ಹೊರ ನಡೆದಳು …..ಅವಳ ಹಿಂದಿ ಪ್ರಮೋದ್ ಓಡಿ ಹೋದ ಪ್ರೇಮಳ ಭುಜವನ್ನು ಗಟ್ಟಿಯಾಗಿ ಹಿಡಿದು “ಪ್ರೇಮ ನನ್ನನ್ನು ಕ್ಷಮಿಸು ನೀನು ಕಣ್ಣೀರು ಹಾಕಬೇಡ ದಯವಿಟ್ಟು ನನಗೆ ಕ್ಷಮಿಸಿದೆ ಅಂತ ಒಂದು ಮಾತು ಹೇಳು ನನಗೆ ಅಷ್ಟೇ ಸಾಕು ಅಂತ ಅಂಗಲಾಚಿದ…… ಮೋಸಗಾರರು ಈ ರೀತಿ ಕ್ಷಮೆ ಕೇಳುತ್ತಿರುವುದು ನೋಡಿ ಪ್ರೇಮ ನಕ್ಕಳು ……”ಹೋಗು ನಾನು ಕ್ಷಮಿಸಿದ್ದೇನೆ”???!!!! ಅಂದುಬಿಟ್ಟಳು …”ಅಷ್ಟು ಸಾಕು ಇನ್ನು ಮುಂದೆ ನೀನು ಸುಖವಾಗಿರು ಅಷ್ಟೇ “…. ಅಂತ ಹೇಳಿ ದಾರಿಯಲ್ಲಿಯೇ ಇಷ್ಟೆಲ್ಲ ಮಾತಾಯಿತು …
ಜೀವನದ ನಡೆದಾರಿಯಲ್ಲಿ ಬಿಟ್ಟು ಹೋದ
ಅವಳಿಗೆ ವಿಧಾಯ ಹೇಳಿ ಹೋದ ದಾರಿಯನ್ನೇ ಪ್ರೇಮ ನೋಡುತ್ತಾ ಇದ್ದಿದ್ದಳು ……!!!
ಪ್ರೇಮ ತಾನೂ ಪ್ರಮೋದನ ಸರಿಸಾಟಿ ಇಲ್ಲವಾದರೂ ಅವನು ತನ್ನನ್ನು ಆರ್ಥಿಕ ನಿಚ್ಚಣಿಕೆಯಾಗಿ ಬೆಳೆಸಿದ…. ಭಾವನೆಗಳೊಂದಿಗೆ ಆಟ ವಾಡಿದ್ದ ….ಇತ್ತ ತಾಯಿ ತನ್ನ ಮಗನ ಮದುವೆಗಾಗಿ ಕೈಯೆಲ್ಲಾ ಬರಿದು ಮಾಡಿಸಿದ್ದಳು. ತನ್ನ ಮದುವೆಯ ಬಗ್ಗೆ ಎಂದು ಮಾತು ಎತ್ತಲಿಲ್ಲ ಏಕೆಂದರೆ ಅವಳ ಮನೆಯ ಖರ್ಚು ನಡೆಸಬೇಕಿತ್ತು ……ಒಂದೆಡೆ ತನ್ನ ಸುಖ ದುಃಖ ನೋವು ಹಂಚಿಕೊಂಡು ಒಡನಾಟದಲ್ಲಿದ್ದ ಪ್ರೀತಿಯ ಗೆಳತಿ ತನ್ನ ಗಂಡನನ್ನು ಲಪಟಾಯಿಸಿದ್ದಳು.ಈ ಆಘಾತಗಳಿಂದ ಪ್ರೇಮಳಿಗೆ ಕಂಬನಿ ಹರಿಯಲಿ ಇಲ್ಲ ನೋವಿನ ವಿರಹದ ಉರಿ ಎದೆಯಲ್ಲಿ ಉರಿದು ಬೂದಿಯಾಗಿ ಹೋಯಿತು.
ಇದೆಲ್ಲಾ ವಿಧಿ ಕೈವಾಡ ಸರಿ ಅನಿಸಿತು ನಮ್ಮಗಳ ಕೈ ಮೀರಿದ್ದೆಲ್ಲವನ್ನು ಧೈರ್ಯಕ್ಕೆ ಅರ್ಪಿಸಿದಳು. ಅದೆಷ್ಟು ಹೆಣ್ಣು ಮಕ್ಕಳು ಒಂದಿಲ್ಲ ಒಂದು ಪ್ರೀತಿಯಿಂದ ನಿಜವಾದ ಪ್ರೀತಿ ಪ್ರೇಮದಿಂದ ವಂಚಿತರಾಗಿದ್ದಾರೆ ನಾವು ಪಡೆದುಕೊಂಡಿದ್ದು ನಾವು ಅನುಭವಿಸಬೇಕು ಅದಕ್ಕಿಂತ ಕಿಂಚ್ಚಿತ್ತು ಹೆಚ್ಚಾಗಿ ಇಲ್ಲ ಕಡಿಮೆಯು ಇಲ್ಲ….. ಅಲ್ಲವೇ
ಅಂದು ಮಾತ್ರಕ್ಕೆ ಪ್ರೇಮಾಳ ಜೀವನ ಅಲ್ಲಿಗೆ ವಿರಾಮ ಕೊಡಲಿಲ್ಲ ಎಲ್ಲ ಸಂಬಂಧಗಳು ಬಂಧು ಬಳಗ ಮಿತ್ರರು ಎಲ್ಲವನ್ನು ತನ್ನ ಆಯತದೊಳಗೆ ಇರಿಸಬೇಕು …. ಬದುಕಿನಲ್ಲಿ ಎಲ್ಲರದು ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳಲಾಗುವುದು ನಿರ್ವಹಿಸಲಾಗದು….. ಯಾವುದೇ ಸಂಬಂಧವಾಗಲಿ ತಾಯಿಯೇ ಇರಲಿ ಒಡಹುಟ್ಟಿದವರೇ ಇರಲಿ ತನ್ನ ಗಂಡನಾಗಲಿ ಎಲ್ಲರ ಪ್ರತಿ ತನ್ನ ಕರ್ತವ್ಯವನ್ನು ಆದಷ್ಟು ಮಟ್ಟಿಗೆ ವಹಿಸಬೇಕು ಆದರೆ ಅದೇ ತನ್ನ ಇಡೀ ಜೀವನದ ದುಃಖಕ್ಕೆ ಕಾರಣವಾಗಬಾರದು ಎನ್ನುವುದನ್ನು ತಿಳಿದಳು ಪ್ರೇಮ ದಿನಗಟ್ಟಲೆ ಅಳುತ್ತಾ ಮನೆ ಹಿಡಿದು ಕುಳಿತುಕೊಳ್ಳಲಿಲ್ಲ ತಾಯಿ ಮಗ ಸೊಸೆಯನ್ನು ಬೇರೆ ಮನೆ ಮಾಡಿ ನಿಮ್ಮ ಸಂಸ್ಕಾರವನ್ನು ಇನ್ನು ನೀವೇ ನಿಭಾಯಿಸಿರಿ ಅಂತ ಹೇಳಿ ಬೇಕಾದಷ್ಟು ದುಡ್ಡನ್ನು ಕೊಟ್ಟು ವಿದಾಯ ಹೇಳಿದಳು. ತನ್ನ ಕೆಲಸ ಮಕ್ಕಳು ವಿಚಾರಗೋಷ್ಠಿ ಇಷ್ಟೆ ಅವಳ ಪ್ರಪಂಚ ಮಕ್ಕಳಿಗಾಗಿ ತಾನೇ ಒಂದು ಉಚಿತ ಶಾಲೆಯನ್ನು ತೆಗೆದಳು ಸಮಯ ಕಳೆದಂತೆ ಎಲ್ಲರ ಹಣೆಯ ಬರದಲ್ಲಿ ದೇವರು ಗಂಡ ಅಂತ ಬರೆದು ಕಳಿಸಿರತಾನಲ್ಲಾ ಮದುವೆ ಎನ್ನುವ ಘಳಿಗೆ ಬಂದಾಯ್ತು ಒಳ್ಳೆಯವನೇ ಸಿಕ್ಕನು, ಪ್ರೇಮ ಈಗ ಮೂರು ಮಕ್ಕಳ ತಾಯಿಯಾಗಿ ಶಾಲೆಯ ಎಲ್ಲ ಮಕ್ಕಳಿಗೂ ತಾಯಿಯಾಗಿ ಒಳ್ಳೆಯದನ್ನು ಆದರಿಸಲು…. ಕೆಟ್ಟತನವ ಪ್ರತಿಭಟಿಸುವ ಸಾಮರ್ಥ್ಯ ಹೊಂದಬೇಕೆನ್ನುವ ಪಾಠವನ್ನು ಓದಿಸುತ್ತಿರುವಳು.
“ನೀವು ಬಾಳಿ ಬಾಳಲು ಬಿಡಿ ಅಂತ ಹೇಳುವಳು”…..
ಸವಿತಾ ದೇಶಮುಖ




