ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೊರೆವ ಚಳಿ ಅವನ ಆಲಿಂಗನ ಬಯಸುತ  ಇರುಳು ಜಾರಿತು
ಕೆಂಡ ಸಂಪಿಗೆಯ  ಕಂಪಿನಲಿ  ತೇಲಿಸುತ  ಇರುಳು ಜಾರಿತು  

 ಬೆಳದಿಂಗಳ ಕಿರಣಕೆ ಅರಳುವ ನೈದಿಲೆಯ ಸೊಬಗು ನೋಡು
 ರಾತ್ರಿ ಅಧರ ಮಧು ಚುಂಬನ ಹಂಬಲಿಸುತ  ಇರುಳು ಜಾರಿತು.

ಆಷಾಢ  ಹೂ ಮಳೆಗೆ ಬಾನಲಿ ಮೂಡಿದೆ  ಕಾಮನಬಿಲ್ಲು
ಅವನಿತ್ತ ಮುತ್ತಿನಾ ಅಮಲು ನೆನಪಿಸುತ ಇರುಳು ಜಾರಿತು    

ಸಂಜೆ  ಬನದ ಗೂಡಲಿ ಹಕ್ಕಿಗಳ ಪಿಸುಮಾತು ಕೇಳುತಿದೆ
 ಬಾಹು ಬಂಧನದ ಕನಸುಗಳ ಕರಗಿಸುತ ಇರುಳು ಜಾರಿತು  

ಮೋಹದ ಮಾಯಾ ಮೃಗಜಲ ಹಿಂದೆ ಓಡಿ ತನು ದಣಿಯಿತು
ನಿತ್ಯ ಅವನ ದಿವ್ಯ ಪ್ರಭೆ ಧ್ಯಾನಿಸುತ ಇರುಳು ಜಾರಿತು


About The Author

5 thoughts on “ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್”

    1. ಮಹಾರಾಣಿ ಮನದಲ್ಲಿ ಅನುಭವಿಸಲಾಗದ ಸುಖವಿದೆ
      ಹೊರಹಾಕಲಾಗದ ಬಯಕೆಯ ಬೇಗುದಿಯಿದೆ ಅದನ್ನು ಕಾವ್ಯ ಕಟ್ಟಿಕೊಡಬಲ್ಲುದೆ?

      ಕಾವ್ಯಕ್ಕೆ ಸ್ವಂತಿಕೆಯಿಲ್ಲ
      ಬರೆಯುವವರ ಬರಹಕ್ಕೆ
      ಭಾವಸೇತುವೆ ಯಾಗಬಲ್ಲದು,
      ಕಲ್ಪನೆಯ ಹೊಳಿಗೆ
      ಕಾಲುವೆಯಾಗಿ ಹರಿಯಬಲ್ಲದು.

      1. ಮನದಾಳದ ಮಾತುಗಳು, ಇಲ್ಲಿ ಪಡಿಮೂಡಿದ, ಆ ಅಸ್ಮಿತೆಯ ಅನಾವರಣ ಮಾತ್ರ, ಅಮೋಘ!.
        ಬಾಷೆ ದುಡಿಸಿಕೊಳ್ಳುವ ಕಲೆಯ ಪರಿಣಿತಿ, ಉತ್ತಮ ಸಾಂದರ್ಭಿಕ, ಪದಲಾಲಿತ್ಯ!, ಅಗತ್ಯ ಪ್ರಾಸದ ಸೊಗಸು! ಉತ್ತಮಕಾವ್ಯ ಧಾರೆ! ಅಭಿನಂದನೆಗಳು, ಮೇಡಂ!!.

  1. ಅದ್ಬುತ ರಸಿಕತೆಯ ತನ್ನೊಡಲಿನ ಭಾವ ಸ್ಪರ್ಶ ❤️ತುಂಬಿ ಬಂತು

Leave a Reply

You cannot copy content of this page

Scroll to Top