ಕಾವ್ಯ ಸಂಗಾತಿ
ಸರ್ವಮಂಗಳ ಜಯರಾಂ
ಕಣ್ಣೆಂಬ ಕ್ಯಾಮರಾದಲ್ಲಿ


ಕಣ್ಣೆಂಬ ಕ್ಯಾಮೆರಾ ದಲ್ಲಿ
ಸೆರೆ ಹಿಡಿದಿರುವೆ ಹೇ ಹುಡುಗ
ನಿನ್ನ ಅಂದವನ್ನು !!
ಕ್ಯಾಮೆರಾ ಏಕೆ ಬೇಕು ಹೇಳು
ನಿನ್ನಂದ ಕಣ್ತುಂಬಿಕೊಳ್ಳಲು
ಕಣ್ ಕ್ಯಾಮೆರಾ ಸಾಕಲ್ಲವೆ !!
ನಿನ್ನ ಬಿಂಬವನ್ನು ಕಣ್ಣಲ್ಲಿ
ತುಂಬಿಕೊಂಡು ಎದೆಗಿಳಿಸಿ
ಬಂಧಿಸಿರುವೆ !!
ನನ್ನೆದೆಯಾಳದಿ ಬಂಧಿಯಾಗಿ
ಎಂದೆಂದಿಗೂ ನೀ ಜೊತೆ ಇರುವೆ
ಬಿಡುಗಡೆಯೇ ಇಲ್ಲ !!
ಕಣ್ಣಲ್ಲಿ ಕಣ್ಣಿಟ್ಟು ಒಮ್ಮೆ
ನಿರುಕಿಸು ನಿನ್ನದೇ ಬಿಂಬ
ಅಲ್ಲಿ ಕಾಣುವೆ
ಸರ್ವಮಂಗಳ ಜಯರಾಂ.



