ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
ʼಒಂಟಿʼ

ವಿಷಯ ಗಹನವಾದದ್ದೇ
ಒಂಟಿ ಆಗಿರುವೇಕೆ
ಈ ಜೀವನಕೆ
ಇರುವಷ್ಟು ದಿನವಿದ್ದು ಬಿಡು
ಸುಂಟರ ಗಾಳಿಯಾಗೇ
ಅದ ಬೀಳಿಸು ಇದ ಕೀಳಿಸು
ಅಲ್ಲಿಂದ ಮೋಡಗಳ ಜರುಗಿಸು
ಇಲ್ಲಿರುವ ಬರಗಾಲ ಕ್ಷೀಣಿಸು
ಗಾಳಿಯುತ್ಪಾತ ನಿರ್ವಾತನಾಗಿ
ಮತ್ತೊಂದು ಮಗದೊಂದು
ಜಗ ಚಕ್ರದ ಗಾಲಿಯಾಗು.
ಹುಟ್ಟು ಸಾವುಗಳ
ಒಬ್ಬಂಟಿತನಗಳ ಮಧ್ಯೆ
ನೀನಾಗು ಜಂಗುಳಿ
ಜಯಿಸಿ ಬಿಡು ಜಯಕಾರ ಹಾಕಿ
ಮೃತ್ಯುಂಜಯನಾಗು ಮತ್ತೊಮ್ಮೆ ಒಂಟಿಯಾಗಿ!

ಡಾ ಡೋ ನಾ ವೆಂಕಟೇಶ




Nice