ಕಾವ್ಯ ಸಂಗಾತಿ
ಎಸ್ ವಿ ಹೆಗಡೆ
ಮಳೆ

ಎಂದಿನಂತಲ್ಲ ಈಗೀಗ ಎಡಬಿಡದೆ ಸುರಿವ ಮಳೆ
ಸಾಕು ಸಾಕಾಗಿದೆ ಬೇಡವೆಂದು ಬೇಡಿದರು ಇಳೆ
ಸುಳುವಿರದೆ ನೆಂಟರಂತೆ ಬಂದು ನುಗ್ಗುವ ಮಳೆ
ಮದುವೆಯ ಹೊಸತರಲ್ಲಿ ಎಲ್ಲೆಂದರಲ್ಲಿ
ಬೀಳುವ ಮೊದಲ ಮುತ್ತಿನ ಮಳೆ
ಕಾಡು ಕೆಡವಿ ಎತ್ತರದ ಗೂಡು ಮಾಡಿ
ಸಾಗರವ ಕೊರೆದು ಬೆಟ್ಟವನು ಸೀಳಿ
ಒಬ್ಬರ ಮೇಲೊಬ್ಬರ ಮೇಲೆ ಸಮರಸಾರಿ
ಉಸಿರು ಕಟ್ಟುವ ಜನಸಂದಣಿ ನಗರ ಸೇರಿ
ಮೆಲ್ಲೆ ಮೀರಿ ಬರೆದ ಗೆರೆಯನು ದಾಟಿ
ಪಾಚಿ ತುಂಬಿದ ಪಾಟಿಯ ಬರ ಅಳಿಸಿ
ಅದೋ ನೋಡಿ ತಪ್ಪಿಗೆ ಕಿವಿ ಹಿಂಡುವ
ಕಾರ್ಮೋಡವೇ ಭುವಿಗಪ್ಪಳಿಸುವ ಮಳೆ
ಎಸ್ ವಿ ಹೆಗಡೆ




