ಸಂಗೀತ ಸಂಗಾತಿ
ಪಂಡಿತ ಡಾ. ಸತೀಶ ಹಂಪಿಹೊಳಿ –
ಅರವತ್ತು ತುಂಬಿದ ಸಂಭ್ರಮದಲ್ಲಿ,

ಪಂಡಿತ ಡಾ. ಸತೀಶ ಹಂಪಿಹೊಳಿ – ಅರವತ್ತು ( ಷಷ್ಠಿಪೂರ್ತಿ )
ಭಾರತೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ,ವ್ಯಕ್ತಿಗೆ ಅರವತ್ತು ವರ್ಷ ಆದಾಗ ಷಷ್ಠಿಪೂರ್ತಿ ಕಾರ್ಯಕ್ರಮ ಮಾಡುವ ವಾಡಿಕೆ ಇದೆ ವಿಶ್ವಮಟ್ಟದಲ್ಲಿ ತಬಲಾ ವಾದನದಲ್ಲಿ ಹೆಸರು ಮಾಡಿರುವ ಪಂಡಿತ ಸತೀಶ ಹಂಪಿಹೊಳಿಯವರು 60 ವಸಂತಗಳನ್ನು ಪೂರೈಸುತ್ತಿದ್ದಾರೆ.
ನಾದ, ಶ್ರುತಿ, ತಾಳ, ಸಮ, ಹುಸಿ,ಹೀಗೆ ನಿರಂತರವಾಗಿ ಒಂದು ಕಡೆಯಾದರೆ ಗುರು ಗೌರವ ಸ್ವರ,ಆಲಾಪ,ಗಮಕ,ತಾನ, ಪಲ್ಟಾ, ಕಾಯಿದಾ,ಮುಕುಡಾ, ಗತ್ತ ಪೇತ್ಕಾರ್, ರೇಲಾ,ರವು, ಚಾಪು, ತಿಹಾಯಿ, ಅಧ್ಯಯನ ಇನ್ನೊಂದು ಅಭ್ಯಾಸ, ಸಂಘಟನೆ, ಸಂಘ, ಸಂಸ್ಥೆ ಕಾರ್ಯಕ್ರಮಗಳು ಸೋಲೋ, ಸಾಥಿ, ಮುಖ್ಯ ಆತಿಥ್ಯ, ಅಧ್ಯಕ್ಷ ಹೀಗೆ ಮತ್ತೊಂದು ಕಡೆಯಲ್ಲಿ ಪಂಡಿತ ಹಂಪಿಹೊಳಿ ನಿರಂತರ ಕ್ರಿಯಾಶೀಲರು.
ಅವರದು ಅಂತರಂಗ ಬಹಿರಂಗದಲ್ಲಿ ಶುದ್ಧವಾದ ಬದುಕು, ಸಮಯ ಪ್ರಜ್ಞೆ,ಚಿತ್ತ ಪ್ರಜ್ಞೆ, ಶಿಸ್ತು, ಕ್ರಮಬದ್ಧವಾದ ಜೀವನ ಮತ್ತು ಅವರು ಆಯೋಜಿಸುವ ಕಾರ್ಯಕ್ರಮಗಳು ಬೃಹತ್ ಹಾಗೂ ಅಚ್ಚುಕಟ್ಟಾಗಿರುತ್ತವೆ ಮತ್ತು ಎತ್ತರದ ಗುಣಮಟ್ಟದ ಕಾರ್ಯಕ್ರಮಗಳಾಗಿರುತ್ತವೆ. ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ಭಾರತದಲ್ಲಿ ಮಾಡಿದ್ದಾರೆ. ಕಷ್ಟ ದಲ್ಲಿರುವ ಬಹಳಷ್ಟು ಕಲಾವಿದರಿಗೆ ಬಾಳನ್ನು ನೀಡಿ,ಬದುಕನ್ನು ಕಲ್ಪಿಸಿ ಕೊಟ್ಟಿದ್ದಾರೆ.
ಕಳೆದ 40 ವರ್ಷಗಳಿಂದ ಸಂಗೀತ ಕ್ಷೇತ್ರವನ್ನು ಬಹಳ ಪ್ರಾಮಾಣಿಕವಾಗಿ ಪ್ರತಿನಿಧಿಸಿದ್ದಾರೆ ಮತ್ತು ಬೆಳೆಸಿದ್ದಾರೆ. ತಮ್ಮ ಪೋಷಕರುಗಳಾದ ಕಸ್ತೂರಿ ಅವರನ್ನು ಹಾಗೂ ತಬಲಾ ದಿಗ್ಗಜ ಪಂ. ಬಸವರಾಜ ಬೆಂಡಿಗೇರಿ ಅವರನ್ನು ಬಹಳ ಅರ್ಥಪೂರ್ಣವಾಗಿ ಅತ್ಯಂತ ಗೌರವದಿಂದ ಸ್ಮರಿಸುತ್ತಾರೆ. ತಮ್ಮ ಪೂರ್ತಿ ಬದುಕನ್ನು ಸಂಗೀತ ಕ್ಷೇತ್ರದ ಬೆಳವಣಿಗೆಗಾಗಿ ಕಲಾವಿದರ ಅಭ್ಯುದಯಕ್ಕಾಗಿ ಸವೆಸಿದರು. ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಪಂ ಸತೀಶ ಹಂಪಿ ಹೊಳಿಯವರು ನಮ್ಮ ನಡುವೆ ಇದ್ದು, 60 ವರ್ಷಗಳನ್ನು ಪೂರೈಸುತ್ತಿರುವುದು ನಮಗೆ ಹೆಮ್ಮೆಯ ಮತ್ತು ಅಭಿಮಾನದ ಸಂಗತಿಯಾಗಿದೆ.
ನಾವು ಪಂಡಿತ ಸತೀಶ ಹಂಪಿಹೊಳಿ ಅವರೊಂದಿಗೆ ವಿಶ್ವಪರ್ಯಟನ ಮಾಡಿದ್ದೇವೆ. ಅನೇಕ ಕಾರ್ಯಕ್ರಮಗಳನ್ನು ವಿಶ್ವದ ತುಂಬಾ ನೀಡಿದ್ದೇವೆ. ಮಾನವೀಯ ಮೌಲ್ಯಗಳನ್ನು ಜೀವನದ ತುಂಬಾ ಬದುಕಿದ ಈ ಅಂತರಾಷ್ಟ್ರೀಯ ತಬಲಾ ಕಲಾವಿದರಿಗೆ 60 ವರ್ಷ ಆಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ.
ಪಂ. ಡಾ. ಮೃತ್ಯುಂಜಯ ಶೆಟ್ಟರ
ಅಂತರಾಷ್ಟ್ರೀಯ ಗಾಯಕರು
ಧಾರವಾಡ




