ಕಾವ್ಯ ಸಂಗಾತಿ
ರಾಶೇ,ಬೆಂಗಳೂರು
ʼಹಾದಿʼ

ಮುಂದಿನ
ಜನಾಂಗದ ಹಾದಿ
ಬಲು ದುರ್ಗಮ..
ಎಲ್ಲೆಡೆ
ಮೋಸದ ಆಟ
ಸ್ವಾರ್ಥದ ಆಮಿಷ..
ಸಂಬಂಧ
ತಿಳಿಯದ ಬದುಕು
ಕಾಂಚಾಣಕೆ ಆದ್ಯತೆ..
ಅನ್ಯಾಯ
ಸುತ್ತ ಮುತ್ತಲೂ
ಅಪರಾಧಿಗಳೇ..
ದಾಂಪತ್ಯ
ಪ್ರೀತಿ,ಪ್ರೇಮಗಳು
ವಂಚನೆಗೇ ಸೀಮಿತ..
ನಂಬಿಕೆ
ವಿಶ್ವಾಸ, ವಿಧೇಯತೆ
ಬರೀ ಮರೀಚಿಕೆ..
———-
ರಾಶೇ..ಬೆಂಗಳೂರು





ಪುಟ್ಟ ಕಾವ್ಯದಲ್ಲಿ ಜೀವನದ ಹಾದಿಯನ್ನು ಸವಿಸ್ತಾರವಾಗಿ ತಿಳಿಸಿದ್ದಾರೆ ಮಮತ ಕೆ ಎಸ್
ಸತ್ಯ.. ಋಣಾತ್ಮಕ ವಿಷಯಗಳೇ ಎಲ್ಲಾ ಕಡೆ.