ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಅಜ್ಞಾತ ನೆರಳು

ಅಜ್ಞಾತ ನೆರಳೊಂದು
ನಮ್ಮ ನಡುವೆ
ನಿಂತು ಹೇಗೋ
ಉಪಕಾರಿ ಆಗುವುದು
ಮಾತಲ್ಲಿ
ಮಮತೆಯಿರಿಸಿ
ನಗೆಯಲ್ಲಿ ಉಪಚರಿಸಿ
ಹೃದಯಕ್ಕೆ ಚಿತ್ರವಾಗಿ
ಇದ್ದು ಬಿಡುವುದು
ಗುಣಕ್ಕೊಂದು ಋಣವಾಗಿ
ಮೊಗದಲ್ಲಿ ಗುರುತಾಗಿ
ಸುತ್ತ ನಿಲ್ಲುವುದು
ಎತ್ತರದ ಕನಸುಗಳ
ಮನದಿ ಬೀಜವಾಗಿಸಿ
ಹಗುರವಾಗುವುದು
ಭಾವಕ್ಕಿಷ್ಟು ಭವಕ್ಕಿಷ್ಟು
ಬಿತ್ತಿ ಬಿಡುವುದು
ಬೆಳಕಲ್ಲಿ ನೆರಳಾಗಿ
ನೆರಳಲ್ಲಿ ಬೆಳಕಾಗಿ
ದೀಪವಾಗುವುದು
ಆದರದ ಸಾದರದ
ಸಾಲುಗಳ ಹಿಡಿದು
ಮುಂದೆ ಸಾಗುವುದು
ಜೊತೆ ನೆಲೆಯಾಗಿ
ಗಟ್ಟಿ ಆಗುವುದು
ನಮ್ಮ ನಗುವಾಗಿ
ಗುರುತಾಗುವುದು…
ನಾಗರಾಜ ಬಿ.ನಾಯ್ಕ




