ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೃದಯಗಳು ಏಕೊ
ಮೌನಕ್ಕೆ ಜಾರುತ್ತಿವೆ
ಮಿಡಿಯುವ ಲಯ ಮರೆಯುತ್ತಿವೆ

ಬೆಚ್ಚಿಬೀಳಿಸುವ ಸುದ್ದಿಗಳು
ಹತ್ತು , ಇಪ್ಪತ್ತು, ಮೂವತ್ತು ಹರೆಯ ದಾಟೋದೆ ಕಷ್ಟವಾಗಿದೆ
ಮನುಷ್ಯನ ಆಯಸ್ಸು

ಅಂಗಮಧ೯ನ, ಯೋಗದ ಭಂಗಿಗಳು ,
ಫಿಟ್ನೇಸ್ ಟ್ರೈನಿಂಗ್ ಗಳು
ಸೌಂದರ್ಯ ಕಾಪಿಟ್ಟು
ಫಿಟ್ನೆಸ್ ಉಳಿಸಿದರು
ಜೀವ ಮಾತ್ರ ಉಳಿಸುತ್ತಿಲ್ಲ

ನಿನ್ನೆ ನೋಡಿದ ನೋಟವೆ ಕೊನೆಯೆ .?
ಈಗ ಆಡಿದ ಮಾತು ಕೊನೆ ಮಾತೆ…?
ನಾಳೆಗಳು ಕನಸುಗಳೆಂಬುದೆಲ್ಲ ಸುಳ್ಳೆ ?

ಕ್ರೌರ್ಯ, ವಂಚನೆ,
ಅಹಂಮಿನ ಅಲಂಕಾರಕ್ಕೆ
ಹೃದಯ ಮೌನ ಬಯಸಿರಬೇಕು

ಪವಿತ್ರ ಹೃದಯ, ಹೃದಯ ದೇಗುಲ,
ಹೃದಯ ತುಂಬಿ ಬರುತ್ತಿದ್ದ
ಭಾವಗಳು
ಈಗ ಹೊಸ ಸಂಶೋಧನೆಗೆ ತೆರೆದುಕೊಂಡಿವೆ

ಹೃದಯ ಸತ್ತು ಬದುಕ ಬಹುದಿತ್ತು
ಸ್ಪಂದನೆ ಯಿಲ್ಲದೆ ಅ
ಆದರೆ ಈಗ…….?


.

About The Author

Leave a Reply

You cannot copy content of this page

Scroll to Top