ಕಾವ್ಯಸಂಗಾತಿ
ಜಯಂತಿ ಕೆ ವೈ
ಅಪ್ಪ

ಹೆಗಲೇರಿ ಕುಳಿತ ನೆನಪಿಲ್ಲ
ಅಕ್ಕರೆಯ ಪರಿಚಯವಿಲ್ಲ
ನೋವಾದಾಗ ಸಂತೈಸಿದುದು ಗೊತ್ತಿಲ್ಲ
ಆಟವಾಡಿಸಲಿಲ್ಲ, ಅಕ್ಷರ ಕಲಿಸಲಿಲ್ಲ
ನೀ ಬಾರದೂರಿಗೆ ಹೊರಟಾಗ
ಮಡಿಲ ಪುಟ್ಟ ಕೂಸು ನಾನು
ಅಪ್ಪನೆಂದರೆ ಆಕಾಶವೆನ್ನುವರು
ನನಗೆ ನೀನು ಆಗಸ ಸೇರಿದ ನಕ್ಷತ್ರ
ನೀ ಬಿಟ್ಟು ಹೋದ ಜೀವನ ಗಾಥೆಯಲಿ
ಕಣ್ಣ ನೀರು ಸೆರೆ ಹಿಡಿದ ಚಿತ್ರಗಳಷ್ಟೆ
ವರುಷ ತುಂಬಿದ ಕೂಸು
ಹರುಷದಲಿ ಹಾಡುವ ಪದ ಪದದಲೂ
ಬಿಕ್ಕುಗಳು!
ದಿವ್ಯ ನಿರಾಶೆಯೊಂದು ಎಡಬಿಡದೆ ಕಾಡುವಾಗ ನಿನ್ನ ಸಾಂತ್ವನದ ಕನವರಿಕೆ
ಎದೆಯಾಳದ ಯಾತನೆಯೊಂದು
ಕಣ್ಣ ಹನಿಯಾಗಿದೆ
ಅನವರತ ನೋವ ನುಂಗಿ ಸಾಗಿದ
ಬಾಳಪಯಣದಲಿ,
ನಿನ್ನ ಕೈ ಹಿಡಿದು
ಹೆಜ್ಜೆ ಹಾಕುವ ಕನಸಿಗೆ ಕೊನೆಯೇ ಇಲ್ಲ
ಅಪ್ಪಂದಿರ ದಿನವಷ್ಟೇ ಅಲ್ಲ
ಪ್ರತಿದಿನದ ಚಣಚಣವೂ ನನಗೆ
ನೀನಿಲ್ಲದ ಅಪ್ಪಂದಿರ ದಿನ
ಶುಭಹಾರೈಕೆಗಳ ನಮನ.
ಜಯಂತಿ ಕೆ ವೈ

ಅಪ್ಪ
ಹೆಗಲೇರಿ ಕುಳಿತ ನೆನಪಿಲ್ಲ
ಅಕ್ಕರೆಯ ಪರಿಚಯವಿಲ್ಲ
ನೋವಾದಾಗ ಸಂತೈಸಿದುದು ಗೊತ್ತಿಲ್ಲ
ಆಟವಾಡಿಸಲಿಲ್ಲ, ಅಕ್ಷರ ಕಲಿಸಲಿಲ್ಲ
ನೀ ಬಾರದೂರಿಗೆ ಹೊರಟಾಗ
ಮಡಿಲ ಪುಟ್ಟ ಕೂಸು ನಾನು
ಅಪ್ಪನೆಂದರೆ ಆಕಾಶವೆನ್ನುವರು
ನನಗೆ ನೀನು ಆಗಸ ಸೇರಿದ ನಕ್ಷತ್ರ
ನೀ ಬಿಟ್ಟು ಹೋದ ಜೀವನ ಗಾಥೆಯಲಿ
ಕಣ್ಣ ನೀರು ಸೆರೆ ಹಿಡಿದ ಚಿತ್ರಗಳಷ್ಟೆ
ವರುಷ ತುಂಬಿದ ಕೂಸು
ಹರುಷದಲಿ ಹಾಡುವ ಪದ ಪದದಲೂ
ಬಿಕ್ಕುಗಳು!
ದಿವ್ಯ ನಿರಾಶೆಯೊಂದು ಎಡಬಿಡದೆ ಕಾಡುವಾಗ ನಿನ್ನ ಸಾಂತ್ವನದ ಕನವರಿಕೆ
ಎದೆಯಾಳದ ಯಾತನೆಯೊಂದು
ಕಣ್ಣ ಹನಿಯಾಗಿದೆ
ಅನವರತ ನೋವ ನುಂಗಿ ಸಾಗಿದ
ಬಾಳಪಯಣದಲಿ,
ನಿನ್ನ ಕೈ ಹಿಡಿದು
ಹೆಜ್ಜೆ ಹಾಕುವ ಕನಸಿಗೆ ಕೊನೆಯೇ ಇಲ್ಲ
ಅಪ್ಪಂದಿರ ದಿನವಷ್ಟೇ ಅಲ್ಲ
ಪ್ರತಿದಿನದ ಚಣಚಣವೂ ನನಗೆ
ನೀನಿಲ್ಲದ ಅಪ್ಪಂದಿರ ದಿನ
ಶುಭಹಾರೈಕೆಗಳ ನಮನ.
ಜಯಂತಿ ಕೆ ವೈ




Feel pathetic
Feel sorry for the child