ಕಾವ್ಯ ಸಂಗಾತಿ
ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್
“ಕ್ಷಮಿಸು ಬಿಡು ಬುದ್ದ
ನಾವು ನಿನ್ನಂತಾಗಲಿಲ್ಲ”

ಕ್ಷಮಿಸಿ ಬಿಡು ಬುದ್ದ
ನಾವು ನಿನ್ನಂತಾಗಲಿಲ್ಲ…
ಆಸೆಯೇ ದು:ಖಕ್ಕೆ ಮೂಲ ಎಂದಿ ನೀನು
ಆಸೆಯನ್ನೇ ಬದುಕಾಗಿಸಿಕೊಂಡವು ನಾವು!

ಬೊಕ್ಕಸ ಬಿಟ್ಟು ಬಡವರ ಸೇವೆಗಾಗಿ ಮನೆ ಬಿಟ್ಟೆ ನೀನು,
ಬಡವರ ಹೊಟ್ಟೆ ಬಟ್ಟೆ ಕಿತ್ತು ಮನೆ ಕಟ್ಟಿದೆವು ನಾವು.
ಕಾಲ, ದೇಶ ಮೀರಿ ಬೆಳೆದವನು
ನೀನುನೆಲೆ, ಬೆಲೆ ಇಲ್ಲದೇ ಒಣ ಬಡಿದಾಡುತ್ತಿದ್ದೇವೆ ನಾವು!
ಶಾಂತಿ, ಸ್ಮರಣೆಯೇ ನೆಮ್ಮದಿಯೆಂಬ ಮಂತ್ರ ಪಠಿಸಿದೆ ನೀನು
ಕ್ರಾಂತಿಯೇ ಶಾಂತಿ ಎಂದು ನಂಬಿ ಕೋತಿಯಾದೇವು ನಾವು!
ಮನ ಗೆದ್ದು ಮಾರು ಗೆದ್ದವ ನೀನು
ಮನೆ ಮಾರು ಎಲ್ಲಾ ಇದ್ದರೂ ಮಾನವರಾಗದೇ ಹೋದೆವು ನಾವು!
ಬದುಕಿನಲ್ಲಿ ಬದ್ದನಾಗಿರುವವ ಬುದ್ದನಾಗುತ್ತಾನೆ ಎಂಬ ಸಂದೇಶ ಕೊಟ್ಟೆ ನೀನು
ಬುದ್ದನಾಗುವ ಎಲ್ಲಾ ಅವಕಾಶ ನಮ್ಮಲಿದ್ದರೂ ಬುದ್ದನಾಗದೇ ಬುದ್ದಿಗೇಡಿ ಆದೆವು ನಾವು!
ಅದಕ್ಕಾಗಿ
ಕ್ಷಮಿಸು ಬುದ್ಧ,
ನಾವು ನಿನ್ನಂತಾಗಲ್ಲಿಲ್ಲ…
ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್, ಚಿಂಚೋಳಿ





ಎಂಥ ವಿಪರ್ಯಾಸ!
Super sir
V good kavan about Budha Palampur M.