ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ಅಮೃತ ವರ್ಷಿಣಿ

ಮನದ ಒಡತಿ ನೀನು ಅಮೃತ ವರ್ಷಿಣಿ
ಆಕಸ್ಮಿಕ ಅನಿವಾರ್ಯವೋ ನಾ ಕಾಣೆ ವರ್ಷಿಣಿ!
ಮೋಹಿನಿಯಂತೆ ಬಂದ ನನ್ನ ಗೆಳತಿ ನೀನು
ಮನದಾಳದ ಮಾತುಗಳಿಗೆ ಜೀವ ತುಂಬಿದೆ ನೀನು!!
ಹೇಳಲು ಬಯಸಿದೆ ಹೇಳಲಾಗದ ಮಾತುಗಳು
ಸುಮಧುರ ಭಾವನೆಗಳ ಗೊಂಚಲು ನೀನು!
ಮೋಹದ ಬಲೆಯಲ್ಲಿ ಸಿಲುಕಿದ ಮೀನು ನಾನು
ಹೇಗೆ ಬಿಡಿಸಲಿ ಗೆಳತಿ ನಿನ್ನ ಭಾವ ಬಂಧನವು ಹೇಳು!!
ಹೇಳಬೇಕೆಂದು ಕ್ಷಣ ನನ್ನಿ ಮನ ಬಯಸುತ್ತಿದೆ
ಹೇಳಲಾಗದೆ ಈ ಮನಸು ಆತೋರೆಯುತ್ತಿದೆ!
ಪ್ರೀತಿ ಬಯಕೆಯ ಉಯ್ಯಾಲೆ ತೂಗುತಿದೆ
ಈ ಹೃದಯದ ಚಡಪಡಿಕೆ ನಿನಗೆ ಅರ್ಥವಾಗದೆ!!
ಕಾವ್ಯ ಲೋಕದ ವಿಸ್ಮಯ ಕಲ್ಪನೆಯ ಸುಂದರಿ
ಕನಸಲ್ಲಿ ಹಗಲು ಇರುಳು ನರ್ತಿಸುವ ಮಯೂರಿ!
ಅಮೃತ ವರ್ಷಿಣಿಯಾಗಿ ಬರಡು ಭೂಮಿಗೆ ಬರಲು
ಬಂದು ಹಸಿರಾಗಿಸಿದೆ ನೀ ಎನ್ನ ಮನದ ಒಡಲು!!
ಕೆ.ಎಂ. ಕಾವ್ಯ ಪ್ರಸಾದ್





ಅಮೃತ ವರ್ಷಿಣಿ ಕಾವ್ಯ ಮನದಾಳದ ಮಾತು
ಹೊರ ಬಂದಿವೆ.