ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾಕೋ ಕಥೆ ಮುಂದೆ ಓಡುತ್ತಾನೇ ಇಲ್ಲ ಅಲ್ಲೇ ಗಿರಕಿ ಹೊಡಿತಾ ಇದೆ ಅಂತ ಅನ್ನಿಸ್ತಾ ಇದೆಯಾ. ಈ ಎಪಿಸೋಡ್ ನಲ್ಲಿ ಸ್ವಲ್ಪ ಫಾಸ್ಟ್ ಫಾರ್ವರ್ಡ್ ಮಾಡಿಬಿಡೋಣ ಅಲ್ವಾ?

ಆಯಿತು. ಡಿಗ್ರಿ ಪರೀಕ್ಷೆಯು ಮುಗಿಯಿತು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಸಹ ಆಯಿತು. ಆದರೂ ಇನ್ನು ಯಾವ ಕೆಲಸಕ್ಕೂ ಅಪ್ಲೈ ಮಾಡುವ ಅವಕಾಶವೇ ಸಿಗಲಿಲ್ಲ. ಹಾಗೆ ಅಂದುಕೊಳ್ಳುವ ಸಂದರ್ಭದಲ್ಲಿ ಬಿ ಎಸ್ ಆರ್ ಬಿ ಬ್ಯಾಂಕಿನ ಪರೀಕ್ಷೆಗಳ ನೇಮಕಾತಿ ಜಾಹೀರಾತು ಬಂದು ಅದಕ್ಕೆ ಅರ್ಜಿ ಗುಜರಾಯಿಸಿ ಆಯಿತು. ಸಾಮಾನ್ಯ ವಿಮೆ ಅಂದರೆ ಜನರಲ್ ಇನ್ಸೂರೆನ್ಸ್ ನ್ಯೂ ಇಂಡಿಯಾ ಇನ್ಸೂರೆನ್ಸ್ ಗಾಗಿ ನೇಮಕಾತಿ ಜಾಹೀರಾತು ಬಂದಿತು. ಅದಕ್ಕೂ ಅರ್ಜಿ ಹಾಕಿ ಆಯಿತು. ನಂತರ ರೈಲ್ವೆ ನೇಮಕಾತಿ ಅರ್ಜಿ ಹಾಕಿ ಆಯಿತು ಕಡೆಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ ಸರ್ಕಾರದ ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಅದಕ್ಕೂ ಅರ್ಜಿ ಹಾಕಿ ಆಯಿತು. ಒಂದಷ್ಟು ಚಟುವಟಿಕೆ ಕಂಡುಬಂದಿತು ಪರೀಕ್ಷೆಗಳಿಗೆ ಹಾಗೆ ರೆಡಿ ಆಗುತ್ತಿದ್ದೆ. ಮಧ್ಯೆ ಒಂದೆರಡು ಕಡೆ ಖಾಸಗಿ ಕಂಪನಿಗಳಲ್ಲಿ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ ಮನೆಯ ಹತ್ತಿರದಲ್ಲಿ ಇದ್ದ ಒಂದು ಕೈಗಾರಿಕೆಯಲ್ಲಿ ಕರೆ ಬಂತು. ಕುಳಿತು ಮಾಡುವುದೇನು ಎಂದು ಅಲ್ಲಿಗೆ ಹೋಗಲು ಆರಂಭಿಸಿದೆ. ಒಂದೆರಡು ತಿಂಗಳು ಅಲ್ಲಿ ಕೆಲಸ ಮಾಡಿ ನಂತರ ಬಿಟ್ಟುಬಿಟ್ಟೆ.

ಬ್ಯಾಂಕ್ ಪರೀಕ್ಷೆ  ಉತ್ತೀರ್ಣ ಆಯಿತು. ನಂತರ ಸಂದರ್ಶನಕ್ಕೂ ಬಂತು, ಸಿದ್ಧಾರ್ಥ ಹೋಟೆಲ್ ಪಕ್ಕದ ಕೆನರಾ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಸಂದರ್ಶನ ಸಹ ನಡೆಯಿತು. ಒಂದು 10 ನಿಮಿಷದ ಸಂದರ್ಶನ. ಏನೂ ಹೆಚ್ಚು ವಿಷಯದ ಬಗ್ಗೆ ಕೇಳಲಿಲ್ಲ. ಯಾಕೋ ನನಗೂ ತೃಪ್ತಿ ಕೊಡಲಿಲ್ಲ ಆದರೆ ಎಲ್ಲಾ ಕಾಟಾಚಾರಕ್ಕೆ ನಡೆಯುತ್ತಿದೆ ಎನ್ನುವ ಭಾವನೆ ಬಂದಿತ್ತು ಹಾಗೆಯೇ ಅದರಲ್ಲಿ ಆಯ್ಕೆಯಾಗದೆ ರೆಗ್ರೆಟ್ ಲೆಟರ್ ಬಂದಾಗ ನಾನು ಅಂದುಕೊಂಡಿದ್ದು ನಿಜ ಎಂದು ಅನಿಸಿತು . ಸೋ ಎರಡನೆಯ ಯತ್ನವೂ ಪೂರ್ಣ ವೈಫಲ್ಯ.

ಆ ಸಮಯದಲ್ಲಿ ನನ್ನ ಮದುವೆಯೂ ಆಗಿ ಕೆಲಸ ಸಿಗದೇ ಇದ್ದ ಚಿಂತೆ ಅಷ್ಟೇನು ಕಾಡಲಿಲ್ಲ. ನಂತರ ರೈಲ್ವೆ ಪರೀಕ್ಷೆಯ ಕರೆ ಬಂದಿತು ಈ ಬಾರಿ ನಾನು ನನ್ನ ತಂಗಿಯೂ ಸಹ ಪರೀಕ್ಷೆಗೆ ಬರೆದು ಬಂದೆವು ಏಕೋ ನನ್ನದು ಈ ಸಾರಿ ಲಿಖಿತ ಪರೀಕ್ಷೆಯೆ ಪಾಸ್ ಆಗಲಿಲ್ಲ ನನ್ನ ತಂಗಿಯದು ಪಾಸಾಗಿ ಸಂದರ್ಶನವಾಗಿ ಮೈಸೂರಿನಲ್ಲಿಯೇ ಕೆಲಸದ ಕರೆಯೂ ಬಂದಿತು ಅದು ಸ್ವಲ್ಪ ಖುಷಿ ಕೊಟ್ಟ ವಿಷಯ. ನ್ಯೂ ಇಂಡಿಯಾ ಅಶ್ಯೂರೆನ್ಸ್ ನಲ್ಲಿ ಲಿಖಿತ ಪರೀಕ್ಷೆ ಮುಗಿಯಿತು ಆದರೆ ಅದರ ಫಲಿತಾಂಶ ತಿಳಿಯಲಿಲ್ಲ.

ಈ ಸಮಯದಲ್ಲಿ ತಿಳಿದು ಬಂದ ವಿಷಯ ಎಂದರೆ ಭಾರತೀಯ ಜೀವವಿಮ ನಿಗಮದಲ್ಲಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸಿದವರು ತಮ್ಮ ಹುದ್ದೆಯನ್ನು ಖಾಯಂ ಮಾಡಬೇಕೆಂದು ಕೋರ್ಟಿನ ಮೊರೆ ಹೋಗಿದ್ದಾರೆ. (Case NTB _/1985). ತಾತ್ಕಾಲಿಕ ಉದ್ಯೋಗಿಗಳನ್ನು ಪ್ರತಿನಿಧಿಸಿ 8 ಕಾರ್ಮಿಕ ಸಂಸ್ಥೆಗಳು ನ್ಯಾಷನಲ್ ಟ್ರಿಬ್ಯುನ್ ಗೆ ಮೊರೆ ಹೋಗಿದ್ದಾರೆ ಹಾಗೂ ಆ ವಿಷಯವಾಗಿ ಚರ್ಚೆಗಳು ನಡೆದು ಅಂತಿಮ ತೀರ್ಪಿನಲ್ಲಿ ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂ ಮಾಡುವ ಆದೇಶ ಬಂದಿದೆ.ಆದರೆ ಈ ನಡೆ ಜೀವ ವಿಮಾ ನಿಗಮಕ್ಕೆ ಒಪ್ಪಿತವಾಗದೆ ಅವರು ಮತ್ತೆ ಅದರ ವಿರುದ್ಧ ಕೇಸ್ ಹಾಕಿದ್ದಾರೆ. ಹಾಗೂ ಆ ವಿಷಯ ಇತ್ಯರ್ಥವಾಗುವವರೆಗೆ ಅಥವಾ ಅವರನ್ನೆಲ್ಲ ಖಾಯಂ ಮಾಡಿದ ನಂತರ ಮತ್ತೆ ಹೊಸ ನೇಮಕಾತಿ ಮಾಡಿಕೊಳ್ಳಬಹುದು ಎಂದು. ಅಲ್ಲಿಗೆ ಜೀವ ವಿಮಾ ನಿಗಮದ ಎರಡನೆಯ ನೇಮಕಾತಿ ಪಟ್ಟಿ ಬರುವುದು ಅಸಾಧ್ಯವೇ ಎಂಬುದು ಸಹ ಖಾತ್ರಿಯಾಯಿತು. ಇದರ ಬಗ್ಗೆ ಸಾಧ್ಯವಾದಲ್ಲಿ ಮುಂದಿನ ಅಂಕಣಗಳಲ್ಲಿ ವಿವರವಾಗಿ ಬರೆಯುವೆ.

ಸರಿ ಮುಂದೇನು ಬೇರೆ ಕೆಲಸಗಳಿಗೆ ಹಾಗೆ ಅರ್ಜಿ ಗುಜರಾಯಿಸೋಣ ಇದುವರೆಗೆ ಖಾಸಗಿ ಕಂಪನಿಗಳಿಗೆ ಹೋಗುವುದು ಬೇಡ ಎಂದುಕೊಂಡಿದ್ದ ನಾನು ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೂ ಅರ್ಜಿ ಹಾಕಲು ಆರಂಭಿಸೋಣ ಎಂದುಕೊಂಡೆ.

ಆದರೆ ಕೋರ್ಟಿನ ಕೇಸು ನಿರ್ಣಯ ವಾಗುವ ಮೊದಲು ಒಂದು ಪಟ್ಟಿ 25 ಜನದ್ದು ಬಿಡುಗಡೆಯಾಗಿ ನಿಗಮದಲ್ಲಿ ಆಯ್ಕೆ ಪ್ರಕ್ರಿಯೆ ಮುಂದುವರೆಯಿತು. ಒಟ್ಟು 50 ಜನರನ್ನು ತೆಗೆದುಕೊಂಡ ಹಾಗೆ ಆಯಿತು ಇದು ನಡೆದದ್ದು ಜೂನ್ ೧೯೮೭ ರಲ್ಲಿ. ದುರದೃಷ್ಟವಶಾತ್ ಈ ಪಟ್ಟಿಯಲ್ಲಿಯೂ ಸಹ ನನ್ನ ಹೆಸರು ಇರಲಿಲ್ಲ. ಅಲ್ಲಿಗೆ ಆ ನೇಮಕಾತಿಯ ಪೂರ್ತಿ ಆಸೆ ಬಿಟ್ಟು ಹೋಯಿತು. ಈ ಪಟ್ಟಿಯಲ್ಲಿ ನನ್ನ ತಂಗಿಯ ಪತಿ ಪ್ರಸನ್ನ ಅವರ ನೇಮಕಾತಿ ಆಗಿತ್ತು ಎನ್ನುವುದು ಅವರ ಮದುವೆಯ ಸಮಯದಲ್ಲಿ ತಿಳಿದು ಬಂದ ವಿಷಯ.

ಹಾಗೆ ಆರಾಮವಾಗಿ ಪೂರ್ಣ ಪ್ರಮಾಣದ ಗೃಹಿಣಿಯಾಗಿ ಚೆನ್ನಾಗಿ ತಿಂದುಂಡುಕೊಂಡು ಹವ್ಯಾಸಗಳನ್ನು ಬೆಳೆಸಿಕೊಂಡು ಇದ್ದುಬಿಟ್ಟೆ, ಮಧ್ಯಮಧ್ಯ ಕೆಲವೊಂದು ಸಂದರ್ಶನಗಳಿಗೆ ಹೋಗುತ್ತಿದ್ದರು ಅವು ಬಹಳ ದೂರ ಓಡಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಇಲ್ಲ ಮನೆಯಲ್ಲಿ ಬೇಡ ಎನ್ನುತ್ತಿದ್ದರು. ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟ ಹಾಗೆ ನಾನು ಮಜವಾಗಿ  ಸಂಪೂರ್ಣ ಸೋಮಾರಿತಾಗಿ ಇದ್ದು ಬಿಟ್ಟಿದ್ದೆ. ಇದೇ ಸಮಯದಲ್ಲಿ ನಮ್ಮ ತಂದೆಯ ಮನೆಯವರು ಬಹಳ ವರ್ಷಗಳಿಂದ ಇದ್ದ ಇಂಡಸ್ಟ್ರಿಯಲ್ ಸಬರ್ಬ್ ನ ಆ ಮನೆಯನ್ನು ಬಿಟ್ಟು ವಿದ್ಯಾರಣ್ಯ ಚಿತ್ರಮಂದಿರದ ಬಳಿ ಇರುವ ಮನೆಗೆ ನಿವಾಸ ಬದಲಾವಣೆ ಮಾಡಿದ್ದರು.

ಒಂದು ದಿನ ಹಳೆಯ ಮನೆಯ ಪಕ್ಕದ ಮನೆಯ ಲತಾ ಒಂದು ಪತ್ರವನ್ನು ತೆಗೆದುಕೊಂಡು ಬಂದು ಕೊಟ್ಟಿದ್ದರು. ಕಾರ್ಮಿಕ ಸಂಘದವರು ಇನ್ನು ಯಾವ ಹೊಸ ನೇಮಕಾತಿಯೂ ಇಲ್ಲ ಕೋರ್ಟ್ ಆದೇಶ ಹಾಗೆ ಬಂದಿದೆ ಎಂದು ಹೇಳಿಬಿಟ್ಟಿದ್ದರಿಂದ ನನಗೇನು ಆ ಪತ್ರ ನೋಡಿ ಖುಷಿ  ಅನಿಸಲಿಲ್ಲ ಸುಮ್ಮನೆ ತೆಗೆದು ನೋಡಿದೆ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಬಸವನಗುಡಿ ಶಾಖೆಯಲ್ಲಿ 45 ದಿನಗಳ ಕಾಲಕ್ಕೆ ಬಂದು ಕೆಲಸ ಮಾಡಲು ಹೇಳಿದ ಆದೇಶವಾಗಿತ್ತು. ಈ 45 ದಿನ ಏಕಪ್ಪಾ ಎಂದರೆ ಮುಂಚೆ ತಾತ್ಕಾಲಿಕವಾಗಿ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ತಡೆರಹಿತವಾಗಿ ಅವರಿಂದ ಸೇವೆ ತೆಗೆದುಕೊಂಡಿದ್ದು ಹೀಗಾಗಿ 45 ದಿನಕ್ಕಿಂತ ಹೆಚ್ಚು ಹಾಗೂ ಒಟ್ಟು ೮೫ ದಿನ ಕಾರ್ಯ ನಿರ್ವಹಿಸಿದವರನ್ನು ಕಾಯಂ ಮಾಡಬೇಕು ಎಂಬುದು ಕೋರ್ಟ್ ಆದೇಶ ಆಗಿತ್ತು. ಮತ್ತೆ ಮುಂದೆ ಹೀಗೆ ತಾತ್ಕಾಲಿಕವಾಗಿ ಕೆಲಸ ಮಾಡಿದವರು ಕೋರ್ಟ್ ಮೆಟ್ಟಲು ಹತ್ತಬಾರದು ಎಂಬ ಉದ್ದೇಶದಿಂದ 45 ದಿನ ಮಾತ್ರ ಕಾರ್ಯನಿರ್ವಹಿಸಲು ಆದೇಶವಿತ್ತು.

ಬೆಂಗಳೂರಿಗೆ ಹೋಗಿ ಕಾರ್ಯ ನಿರ್ವಹಿಸಲು ಖಂಡಿತ ಸಾಧ್ಯ ಇರಲಿಲ್ಲ . ಆದರೆ ಒಂದು ಅವಕಾಶ ಮೈಸೂರಿನ ಶಾಖೆಯಲ್ಲಿ ಮಾಡಲು ಕೊಟ್ಟರೆ ಖಂಡಿತ ನಿರ್ವಹಿಸುವೆ ಎಂದು ಪತ್ರ ಬರೆಯಲು ನಮ್ಮ ತಂದೆ ಸಲಹೆ ಕೊಟ್ಟರು. ಹಾಗೆ ಆ ರೀತಿ ಪತ್ರ ಬರೆದ ಮೇಲೆ ಒಂದು 15 ದಿನಗಳ ನಂತರ ಮೈಸೂರು ಶಾಖೆ ಎರಡರಲ್ಲಿ ಬಂದು ಕಾರ್ಯನಿರ್ವಹಿಸಲು ಆದೇಶ ಬಂದಿತು. ಮನೆಯಲ್ಲಿ ಕುಳಿತಿರುವ ಬದಲು 45 ದಿನ ಕಚೇರಿಗೆ ಹೋಗಿ ಕೆಲಸ ಮಾಡಿದರೆ ಒಂದೂವರೆ ತಿಂಗಳ ಸಂಬಳ ಸಿಗುತ್ತದೆ ಎಂಬ ಉದ್ದೇಶದಿಂದ ಅದಕ್ಕೆ ಒಪ್ಪಿ ಹೊರಡಲು ಸಿದ್ದಳಾದೆ. ಮೈಸೂರಿನ ಶಾಖೆ 2 ಆಗ ಲಷ್ಕರ್ ಮೊಹಲ್ಲ ದಲ್ಲಿ ಇತ್ತು. ನಮ್ಮ ಮನೆಯಿಂದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ನೇರ ಬಸ್ ಇತ್ತು ಅಲ್ಲಿಂದ ಐದು ನಿಮಿಷ ನಡೆದರೆ ಶಾಖೆ ಹಾಗಾಗಿ ಪ್ರಯಾಣವೂ ಸುಲಭ.

ಮನೆಯ ಬಳಿಯೇ ಇದ್ದ ಪುರುಷೋತ್ತಮ್ ಅವರಿಗೆ ಈ ಪತ್ರ ತೋರಿಸಿ ವಿಷಯ ತಿಳಿಸಿದಾಗ ಅವರು ಸಂತೋಷ ಪಟ್ಟರು. ಅದೇ ಶಾಖೆಯಲ್ಲಿ ಅವರು ಇದ್ದದ್ದು “ಬನ್ನಿ ರಿಪೋರ್ಟ್ ಮಾಡಿಕೊಳ್ಳಿ “ ಎಂದು ಹೇಳಿದರು ಅವರಿಗೂ ಸಹ ಇದು ಹೊಸ ವಿಷಯ. ಪಟ್ಟಿಯಲ್ಲಿ ಇರುವ ಜನರನ್ನೇ ಆರಿಸಿ ಈ ರೀತಿ ಕಳಿಸಿ ಕೊಡುತ್ತಿದ್ದಾರೆ ಎಂಬ ವಿಷಯವು ಆಗ ತಿಳಿಯಿತು. ಹಾಗಾಗಿ ನಿಗಮದ ನೌಕರಿಯ ಬಗೆಗಿನ ಕನಸು ಮತ್ತೆ  ಜೀವಂತವಾಯಿತು.


About The Author

7 thoughts on “”

  1. ಸೂಕ್ತ ಚಿತ್ರಗಳೊಂದಿಗೆ ಪ್ರಕಟಿಸಿದ ಸಂಪಾದಕರಿಗೆ ಅನಂತಾನಂತ ಧನ್ಯವಾದಗಳು

    ಸುಜಾತಾ ರವೀಶ್

  2. ನಿಮ್ಮ ಲೇಖನಗಳನ್ನು ಓದುವುದೇ ಒಂದು ಖುಷಿ ಸುಜಾತಾ….. ವೃತ್ತಿ ಬದುಕಿನ ಹಿನ್ನೋಟದ ಒಂದೊಂದು ಸಂಚಿಕೆಯೂ ಅರ್ಥಪೂರ್ಣವಾಗಿ ಮೂಡಿ ಬಂದಿದೆ.

    1. ,ಬರಹ ಓದಿಸಿಕೊಳ್ಳುವ ಸರಳತೆ ಹೊಂದಿದೆ ಅಭಿನಂದನೆಗಳು

  3. ನಿನ್ನ ಪ್ರಯತ್ನಕ್ಕೆ ಒಂದು ಫಲ ಈಗ ಸಿಕ್ಕಿತೇನೋ ಎನ್ನುವ ಕುತೂಹಲ,ದಿಂದ ಓದಿಸಿಕೊಂಡು ಹೋಗುತ್ತದೆ

    ಸುಧಾ ಗಾಯತ್ರಿ

  4. ಫಲ‌ ಯಾವತ್ತೂ ಮರೀಚಿಕೆ ಅಲ್ಲ,ಆದರೆ ಅದು ನಮ್ಮ ತಾಳಮೇಳಗಳಿಗೆ ಕುಣಿಯುವುದೂ ಇಲ್ಲ,ಅದಕ್ಕೆ ಅದರದ್ದೇ ಹಾದಿ, ಜಸಕೆ ನೂರಾರು ಪಥ ಅಲ್ಲವೆ. ಇದೊಂದು ರೀತಿಯ ಕ್ರಮವಿಪರ್ಯಯ ಅಲ್ಲದ ಸೈರಣೆಯ ಗುರುತು. ಹಾದಿಗುಂಟ ಪಯಣಕೆ ಎಲ್ಲೆ ಎಲ್ಲಿದೆ? ನಿರಂತರ ಕಾಯುವಿಕೆಯನ್ನು ಕೊರಗದಂತೆ,ಕರಗದಂತೆ ಸೊರಗದಂತೆ ಕಾಪಿಟ್ಟುಕೊಳ್ಳುವ ಕ್ರಿಯೆಯೇ ಜೀವಸಾಫಲ್ಯ.ಈ ದಾರಿಯ ನಿಡಿದಾದ ನಡಿಗೆ ಮುದ ನೀಡಿತು.
    ” A confident walking is better than confused running ” ಅನ್ನುವ ಮಾತು ನೆನಪಾಯಿತು.Heard melodies are sweet, But those unheard are more sweeter”- John Keats.

  5. ಜೀವನದಲ್ಲಿ ತಿರುವುಗಳು ‌ಬರುತ್ತಲೇ ಇರುತ್ತವೆ. ಎದುರಿಸಬೇಕು ಜಯಿಸಬೇಕು.
    ಮುರಳಿಧರ ಅ

Leave a Reply

You cannot copy content of this page

Scroll to Top