ಕಾವ್ಯ ಸಂಗಾತಿ
ಸುಧಾ ಪಾಟೀಲ
“ಹರಿದ ಕೌದಿ”
ಹೀಗೊಂದು ರಾತ್ರಿಯಲಿ
ಹರಿದು ಹೋಗಿತ್ತು
ಬಣ್ಣ ಬಣ್ಣದ ಕೌದಿ
ಹೊಲೆದು ಮತ್ತೆ
ಗಟ್ಟಿಗೊಳಿಸಿದೆ
ಭಾವಗಳ ಸರಕು
ಅದೆಷ್ಟೋ ಬಯಕೆ
ಭರವಸೆಗಳ .ಮೂಟೆ
ಕಳೆದು ಹೋಗಿತ್ತು
ಇರುಳು ಹಗಲಾಗುವ ವೇಳೆ
ಉದಯಿಸಿದ ಸೂರ್ಯ
ಮತ್ತೆ ಎಲ್ಲವ ಮರೆತು
ಹಳೆಯ ಬಟ್ಟೆ
ಹೊಸದು ಬದುಕು
ಕಳೆದ ಭೂತದ ನೋವು
ಬರುವ ನಾಳೆಯ ಬೆಳಗು
ಇಂದು ಮುಸಂಜೆಯಲಿ
ನಿರಂತರ ಹುಡುಕಾಟ
ಕಟ್ಟಿ ಕೊಡಲು ಬಾಳು
ಕೌದಿ ಹರಿದಾಗಲೆಲ್ಲ
ಮತ್ತೆ ತೇಪೆ ಹಚ್ಚುವೆ
ಬದುಕ ಬೇಕು
ಚಳಿ ಒಳಗೂ ಹೊರಗೂ
———————-
ಸುಧಾ ಪಾಟೀಲ





ಹರಿದ ಕೌದಿ , ಭಾವನೆಗಳಿಗೆ ಹೋಲಿಸಿ ಚೆನ್ನಾಗಿ ಬರೆಡಿರುವಿರಿ.
ಸೂಪರ್
Nice mam superb
Savita desmukh