ಅನುಭವ ಸಂಗಾತಿ
ಡಿ. ಪಿ. ಯಮನೂರಸಾಬ್
“ಸಾಮಿಲ್ ಕಾಯುವ ಗೋಣ್ಯಪಜ್ಜ”
ಬಾಲ್ಯದ ವಿಶಿಷ್ಠ ನೆನಪು.


ಸುಮಾರು ವರ್ಷಗಳ ಹಿಂದೆ ಹಡಗಲಿ ಪಟ್ಟಣದ ರಾಮಸ್ವಾಮಿ ಬಡಾವಣೆ ಯಲ್ಲಿ ಮುಂಡವಾಡದ ಚನ್ನಪ್ಪ ವಕೀಲರ ಸಾಮಿಲ್ ಇತ್ತು ವೀರಾಪುರ ಗ್ರಾಮದ ಒಬ್ಬ ಅಜ್ಜ ಅದಕ್ಕೆ ರಾತ್ರಿ ಕಾವಲುಗಾರ ಕರ್ರನೆಯ ಮೈ ಬಣ್ಣ ತೆಳ್ಳನೆಯ ಮೈ ಕಟ್ಟು ಬಿಳಿ ಪಂಜೆ ಬಿಳಿ ಅಂಗಿ ತಲೆಗೆ ಬಿಳಿ ರೂಮಾಲು ಸುತ್ತಿಕೊಳ್ಳುತ್ತಿದ್ದ ಸುಮಾರು 80 ವರ್ಷದ ಇಳಿ ವಯಸ್ಸು, ಬೆಳಗಿನ ತಿಂಡಿ ಹೋಟೆಲ್ ನಲ್ಲಿ ಮಾಡಿದರೆ ಮದ್ಯಾಹ್ನಕ್ಕೆ ಊರಿಂದ ರೊಟ್ಟಿ ಬುತ್ತಿಗಂಟು ಬಸ್ಸಲ್ಲಿ ಊರಿಂದ ಯಾರಾದರೂ ತಂದು ಕೊಡುತ್ತಿದ್ದರು ಮದ್ಯಾಹ್ನ ರೊಟ್ಟಿ ಪಲ್ಯ ಊಟಮಾಡಿ ಮಿಕ್ಕಿದ್ದು ರಾತ್ರಿ ಊಟಕ್ಕೆ ಕಟ್ಟಿ ಇಡುತ್ತಿದ್ದ, ನಾನು ಆಗಿನ್ನೂ 14 ವರ್ಷದ ಬಾಲಕ ನನ್ನ ತಂದೆ ಮರದ ವ್ಯಾಪಾರ ಮಾಡುತ್ತಿದ್ದರು ಅಲ್ಲಿಯೇ ವಸ್ತಿ ಉಳಿಯುವುದು ರೂಡಿ ಶಾಲೆಯ ರಜೆ ದಿನ ಶನಿವಾರ ಮದ್ಯಾಹ್ನ ಊಟ ಕಟ್ಟಿಸಿ ಕೊಂಡು ನಾನು ಸಾಮಿಲ್ ನಲ್ಲಿ ಉಳಿದು ಕೊಳ್ಳುತ್ತಿದ್ದೆ ನಮ್ಮ ತಂದೆಯವರಿಗೆ ಊರಿಗೆ ಕಳಿಸಿ ಕೊಡುತ್ತಿದ್ದೆ, ನಾನಿನ್ನು ಚಿಕ್ಕವ ನಿದ್ದ ಕಾರಣ ನಮ್ಮ ತಂದೆ ಗೋಣ್ಯಪಜ್ಜನಿಗೆ ನನ್ನನ್ನು ಕಾಳಜಿಯಿಂದ ನೋಡಿಕೊಳ್ಳಲು ಏಳುತ್ತಿದ್ದರು ಸಂಜೆ 7.ಗಂಟೆಯ ಸುಮಾರಿಗೆ ಬಿಕೋ ಎನ್ನುತ್ತಿತ್ತು ಹಳ್ಳಿಯ ಜನ ಊರು ಸೇರುತ್ತಿದ್ದರು ಯಾರೊಬ್ಬರ ಸದ್ದು ಇರುತ್ತಿರಲಿಲ್ಲ ಆಗ ನನಗೆ ಸಿನಿಮಾ ನೋಡುವ ಹುಚ್ಚು ಬಹಳ ರಾತ್ರಿ 8 ಗಂಟಿಗೆ ಗೋಣ್ಯಪ್ಪಜ್ಜನ ಜೊತೆ ಊಟ ಅಜ್ಜ ಕಟುಗು ರೊಟ್ಟಿ ಕಾಳು ಪಲ್ಯ ಕಟಾರ್ ಎಂದು ಕಡಿಯುತ್ತಿದ್ದ ಆ ಮಜಾನೆ ಬೇರೆ ನಾನು ಭಾಗಿಯಾಗಿ ಊಟ ಮುಗಿಸಿ ಏಗಾದ್ರೂ ಮಾಡಿ ಅಜ್ಜನ ಕಣ್ ತಪ್ಪಿಸಿ ರಾತ್ರಿ ಸೆಕೆಂಡ್ ಶೋ ಸಿನಿಮಾ ನೋಡಲು ತುಂಬಾ ಉತ್ಸುಕನಾಗಿ ಓಡಿ ಹೋಗುತ್ತಿದ್ದೆ ಸಿನಿಮಾ ನೋಡಿ ಹೊರಬಂದ ಕೂಡಲೇ ನನ್ನ ಮೈ ಭಯದಿಂದ ರೋಮಾಂಚನ ಗೊಳ್ಳುತ್ತಿತ್ತು ರಾತ್ರಿ 11.30 ರ ಸಮಯ ಸಾಮಿಲ್ ಪಕ್ಕದಲ್ಲೇ ಸ್ಮಶಾನ ಸ್ಮಶಾನದ ಒಳಗೆ ಹಾದು ಹೋಗ ಬೇಕು ಯಾರೊಬ್ಬರ ಸುಳಿವು ಇಲ್ಲಾ ಸುಯ್ ಎನ್ನುವ ತಂಗಾಳಿ ಮೈ ಬಿಗಿ ಹಿಡಿದು ಮನಸ್ಸು ಹತೋಟಿಯಲ್ಲಿಟ್ಟು ನೇರ ಮನಸ್ಸಿನಿಂದ ಸಾಮಿಲ್ ಒಳಗೆ ಹೆಜ್ಜೆ ಹಾಕುತ್ತಿದ್ದೆ ಅಜ್ಜನ ಕೂಗು ಒಂದು ಪರಲoಗ್ ಕೇಳು ತಿತ್ತು ಒಬ್ಬಂಟಿ ಅಜ್ಜ ಓಯ್ ಓಯ್ ಎಂದು ಕೂಗುತ್ತಾ ಕ್ಯೆಯಲ್ಲಿ ಬೀಡಿ ಜಗ್ಗುತ್ತಿದ್ದ ನನ್ನ ಸುಳಿವು ಇಡಿದು ಲೇ ಕಳ್ಳ ಟಕ್ ಅಚ್ಚಿ ಸಿನಿಮಾ ನೋಡಾಕ್ ಹೋಗಿಯಾ ನಿಮ್ಮಪ್ಪ ಗ ಏಳ್ತೀನಿ ಎಂದು ಕೊಂಚ ಹೆದರಿಸಿ ಸಮಾಧಾನ ಪಡಿಸುತ್ತಿದ್ದ, ನನ್ನನ್ನು ಮಲಗಿಸಿ ರಾತ್ರಿ ಪೂರ್ತಿ ಎಚ್ಚರ ಇರುತಿದ್ದ ಅಜ್ಜ ಬೆಳೆಗು ಮುಂಜಾನೆ ಕೇವಲ ಎರಡು ತಾಸು ಮಾತ್ರ ನಿದ್ರಿಸ್ಸುತ್ತಿದ್ದ ಆತನ ಆರೋಗ್ಯ ಆತನ ಜೀವನ ಶೈಲಿ ಈಗಲೂ ನನನ್ನು ಕಾಡುತ್ತದೆ ಆತನನ್ನು ನೋಡಲು ಯಾರೊಬ್ಬ ಕುಟುಂಬ ಸದಸ್ಯರು ಬರುತ್ತಿರಲಿಲ್ಲ ಆತ ಸುಮಾರು ವರ್ಷಗಳ ಸಾಮಿಲ್ ಕಾಯುವ ಕಾವಲುಗಾರನಾಗಿ ಸೇವೆ ಸಲ್ಲಿಸಿ ಅಲ್ಲಿಯೇ ತನ್ನ ಜೀವಿತದ ಕೊನೆಯವರೆಗೂ ಜೀವನವು ಸಾಮಿಲ್ ಕಾಯುವ ಕಾವಲುಗಾರ ನಾದ ಗೋಣ್ಯಪ್ಪಜ್ಜ ನೀನೇ ನಿನಗೆ ಶ್ರೇಷ್ಠ.
ಡಿ. ಪಿ. ಯಮನೂರಸಾಬ್
ʼ



