ಕಾವ್ಯ ಸಂಗಾತಿ
ಸವಿತಾ ದೇಶ ಮುಖ
ಹೆಣ್ಣಾತ್ಮಗಳು

ಹೆಣ್ಣಾಆತ್ಮಗಳು ಸತ್ತು ಸತ್ವ- ಬತ್ತಿ
ಮಣ್ಣಲಿ ಮಣ್ಣಾಗುವದು ಗೋತ್ತು
ಆದರೂ ತಿರದಿವರ ಗೋಳಾಟ….
ಭಾವ ಸುಟ್ಟು ಭಸ್ಮಾಗಿ ಮಣ್ಣಾಗಿಹುದು
ಅದೆಂದೊ ಆತ್ಮ ಅಸು ನೀಗಿಹುದು
ಸತ್ತಾತ್ಮದಲಿ ದೇಹವಷ್ಟೇ ಉಳಿದು…
ಗಂಡಿನ ಕೈಗೊಂಬೆಯಾಗಿ ನಿಂದಿಹುದು
ಅವನ ಕುಣಿತದ ಆಟಿಕೆ ಕಂಬಾಗಿಹುದು
ಸತ್ತ ಭಾವಕೆ ಮತ್ತೆ ಹಿಚುಕಿ -ತಿವಿದು
ನೋಡುವ ಅವನ ಖುಷಿ ಆಟವದು
ಅವನ ಚೆಲ್ಲಾಟದ ಅಂಗಳವದು..,
ಹೆಣ್ಣುಭಾವಕ್ಕೂ ಇಹುದೊಂದು-
ಒಂದೇ ಸಣ್ಣ ಆಸೆ- ಆಶಯವೊಂದು
ತಿಳಿಯದಾದ ಗಂಡು,ಅದೇನು ನಿಗೂಢ
ಅದು ಅವನ ಅರುವಿನ ಆಚೆ ಇಹುದೇ?!
ಇದು ಅವನ ಜನುಮ ಹಕ್ಕ ಎಂದೇ..?!
ಜನ್ಮದ ಮುದ ತಳಿವನ ಮನದಿ
ಹೆಣ್ನಾತ್ಮಗಳು ಸತ್ತ ಹೆಣಗಳಾದರೇನು…
ತಪ್ಪದಾಗಿದೆ ಗೋಳಾಟ- ಹೆಣ್ಗರಳಿನ
ವಿಧಿಯ ಆಟವಿದೆಂದು ಹೆಸರಿಸಿ-
ತಿಳಿ ಮನ ಭಾವ ಸತ್ತು ಮಾಯವಾದರೂ …
ಆತ್ಮಗಳ ಗೋಳಾಟ ಎಂದೆಂದಿಗೂ
“ಮುಗಿಯದ ಕಥೆಯ ವ್ಯಥೆ”
ಸವಿತಾ ದೇಶ ಮುಖ





ಚೆನ್ನಾಗಿದ್ದೀನಿ ಮೇಡಂ