ಕಾವ್ಯ ಸಂಗಾತಿ
ವರದೇಂದ್ರ ಕೆ ಮಸ್ಕಿ
ʼಅನಂತ ಪ್ರೇಮʼ

ನಾ ಬಯಸಿದ್ದೇನನ್ನ ಗೆಳತಿ
ಹಿಡಿ ಪ್ರೀತಿ ಮತ್ತು ಅರೆಘಳಿಗೆ
ನೀ ನೀಡಿದ್ದಷ್ಟೇ ನನ್ನ ಪಾಲು
ಉಳಿದ ಶೇಷ ನೀ,
ನಾ ಅರವಳಿಕೆ ಮದ್ದು
ನಗು ಕಂಡಾಗ ಅರಳಿದ ಮನ
ಸೋತಿತು ಅರಿಯಲು ನರಿತನ,
ಕಟ್ಟಿದ ಕಂಕಣಕೆ ಬದ್ಧನಾದೆ
ಕಾಣದೆ ಕೈಗಳ ನಂಜು
ನಾ ತಿಳುವಳಿಕೆ ಹೀನ, ಪೆದ್ದು
ಸುಕೃತ ಭಾವದಿ ಕೃತಿ ಜನನ
ಅಲಂಕಾರದಿ ಶೃತಿ ತಾಡನ
ದುರ್ವಿಧಿ ತಾಳ ತಪ್ಪಲು
ತಿರಸ್ಕೃತ, ಪರಿತ್ಯಕ್ತ, ಪರಾಜಿತ
ನಾ ಕಳಂಕ ಹೀನ ಮುದ್ದು
ಆಪ್ತತೆ, ಸಿಹಿ ಭ್ರಮೆಯದು
ಕಲ್ಪನೆಯ ವಿಹಾರ ಬಲ್ರುಚಿ
ಸತ್ಯ ಬಹಿರಂಗ, ದಿಗ್ಭ್ರಮೆ ಮತಿ
ವ್ಯಾಮೋಹ ಕಳಚದ ಜಿದ್ದು
ಭರವಸೆ ನನ್ನ ವರಸೆ
ಅಭಿಮಾನ ನಂದು ಮನಸಾರೆ
ಅನಂತ ಪ್ರೇಮ ಉಳಿಕೆ
ಬರುವ ನಿರೀಕ್ಷೆ ಇದೆ
ಬಯಸುವೆ ಬದವಾಣೆಯ ಸದ್ದು
—————————–
ವರದೇಂದ್ರ ಕೆ ಮಸ್ಕಿ





ಧನ್ಯವಾದಗಳು ಸರ್
Super