ಕಾವ್ಯಸಂಗಾತಿ
ಮಾಲಾ ಚೆಲುವನಹಳ್ಳಿ
ʼಸಂಬಂಧ ಕೊಂಡಿʼ

ಸಂಬಂಧ ಕೊಂಡಿ ಕಳಚಿ
ಮೇಲುಗೈ ಸಾಧಿಸಿದೆ ತನ್ನತನ
ಅನುಬಂಧವಾಗಿ ಊರಾಚೆ
ಸ್ವಾರ್ಥ ವಿಶ್ವಾಸ ಘಾತುಕತನ
ಸನಿಹವಿದ್ದವರಿಲ್ಲ ಸನಿಹದಿ
ಆಂತರ್ಯದಿ ಅನತಿದೂರವೇ
ಮುನಿಸು ಬಿಗುಮಾನ ಮನದಿ
ಅರಿವು ದೂರ ಎಲ್ಲ ಅಪಾರ್ಥವೇ
ಹಿಡಿತ ಮೀರಿದ ಮಾತಿನ ಧಾಟಿ
ಹತೋಟಿ ತಪ್ಪಿದ ವಿಕಲ್ಪ ಚಿಂತನೆ
ಅಭಿಮಾನವೆನ್ನುವುದೇ ಅಜ್ಞಾನ
ಅವಿನಾಭಾವವೇ ಇಲ್ಲಿ ನಿರ್ನಾಮ
ನನ್ನವರೆoಬರು ಕನಸಿನಲ್ಲಿ ಕಣ್ಮರೆ
ದೂರವಾಗಿಹೆವು ನಮ್ಮವರಿಗೆ ನಾವು
ತೊರೆ ವಿಶ್ವಾಸ ನಾವು ಇರುವೆಡೆಯಲ್ಲೇ
ಕಳೆದುಹೋಗುತಿದ್ದೆವಾ.. ಮತ್ತೇನು
ಹಿರಿದು ಕಿರಿದು ಬೇಧವನೆ ಮರೆತು
ಕಾರ್ಯ ನಿರ್ವಹಿಸಿದೆ ಬೇಧ ತಂತು
ಗೌರವದ ನಡೆಯೇ ಇಲ್ಲಿ ದುರ್ಲಭ
ಬಂಧಿಸಿಹು ಬಿಡಿಸಲಾರದ ಕಬಂಧ
—————
ಮಾಲಾ ಚೆಲುವನಹಳ್ಳಿ




