ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್


ನನ್ನ ಅಂತರಂಗದೊಳು ವಲಸೆ ಹೋದವಳು ಮರಳಿ ಬರಲೇ ಇಲ್ಲ
ಕಾಲ ದೂಡಿ ಹೋಯಿತು ಕೊನೆಗವಳು ಮರಳಿ ಬರಲೇ ಇಲ್ಲ
ಶವದ ಪೆಟ್ಟಿಗೆಯಲ್ಲಿ ಇನ್ನು ನೆನಪುಗಳು ಉಸಿರಾಡುತ್ತಿವೆ
ಉಸಿರಾಡಿ ಮರು ಮರುಗಿದವಳು ಮರಳಿ ಬರಲೇ ಇಲ್ಲ
ಆಕಾಶದ ನಭೊ ಮಂಡಲವೇ ಸುತ್ತುತ್ತಿವೆ ಅವಳ ಸುತ್ತಲೂ
ಅದೇಕೋ ಒಂಟಿಯಾಗಿ ಉಳಿದವಳು ಮರಳಿ ಬರಲೇ ಇಲ್ಲ
ಮನಸ್ಸುಗಳ ಮಳೆ ಹನಿಗಳಲ್ಲಿ ಮಿಂದು ಲೀನಳಾದಳು
ಕಣ್ಣೀರಲ್ಲಿ ನೊಂದು ಕರಗಿದವಳು ಮರಳಿ ಬರಲೇ ಇಲ್ಲ
ತನ್ನ ಎದುರಲ್ಲಿಯ ಕನ್ನಡಿಯಲ್ಲಿ ತನ್ನನ್ನು ತಾನು ಕಂಡವಳು
ಮಾಜಾ ಅರೆಕ್ಷಣ ನಾಚಿ ನೀರಾದವಳು ಮರಳಿ ಬರಲೇ ಇಲ್ಲ
——————————
ಮಾಜಾನ್ ಮಸ್ಕಿ



