ಕಾವ್ಯ ಸಂಗಾತಿ
ಬಸವರಾಜ ಉಪ್ಪಿನ
“ದೇವರೆಲ್ಲಿಹನು?”

ದೇವರೆಲ್ಲಿಹನು ದಯವಿಟ್ಟು ಹುಡುಕಿಕೊಡಿ ಎನಗೆ
ಗರ್ಭಗುಡಿಯಲ್ಲಿ ಬೆಚ್ಚನೆಯ ಕುಳಿತಿಹನೆ,
ಶಿಲೆಯಲ್ಲಿ ಕೆತ್ತಿದ ಶಾಂತ ಮೂರ್ತಿಯಾಗಿಹನೆ
ಕಟ್ಟಿಗೆಯ ಕೆತ್ತನೆಯ ಶೃಂಗಾರದಿ ಮೆರೆಯುತ್ತಿಹನೆ
ದೇವರೆಲ್ಲಿಹನು ದಯವಿಟ್ಟು ಹುಡುಕಿಕೊಡಿ ಎನಗೆ
ವೇದ ಮಂತ್ರ ಘೋಷ ವಾಕ್ಯಗಳಲ್ಲಿ ಮುಳುಗಿಹನೆ
ಕುಂಕುಮ ಅರಿಶಿಣ ಭಂಡಾರದ ಪಣೆಯಲಿಹನೆ
ಗುಡಿ ಗಂಟೆಯ ನಾದ ನಿನಾದದಿ ಮಗ್ನನಾಗಿಹನೆ
ದೇವರೆಲ್ಲಿಹನು ದಯವಿಟ್ಟು ಹುಡುಕಿ ಕೊಡಿ ಎನಗೆ
ಶಿಷ್ಟರ ಕರ ಕಷ್ಟಗಳ ಕಣ್ಣೀರಲಿ ಸದಾ ತೇಲುತಿಹನೆ
ದುಷ್ಟರ ರಕ್ತಪಾತಗಳ ಕರದಲ್ಲಿ ಮುಗ್ದದಿ ಕರಗಿಹನೆ
ಡೊಳ್ಳು ಡಮರುಗ ಶಬ್ದದಲ್ಲಿ ನಿತ್ಯ ಕುಣಿಯುತಿಹನೆ
ದೇವರೆಲ್ಲಿಹನು ದಯವಿಟ್ಟು ಹುಡುಕಿ ಕೊಡಿ ನನಗೆ
ಕಾಂಚಾಣ ಇದ್ದವರ ಅಂಧಕಾರದಿ ಮಾಯವಾಗಿಹನೆ
ಬಡವ-ಬಲಿದವರ ಬದುಕಿನ ಕಷ್ಟದಿ ಬಳಲುತ್ತಿಹನೆ
ಭ್ರಷ್ಟರ ಜೈ ಕಾರಂಜಿ ಶಿಷ್ಟರ ಓಂಕಾರದಿ ಅಡಗಿ ಕುಳಿತಿಹನೆ
ದೇವರಲ್ಲಿದ್ದಾನೆ ದಯವಿಟ್ಟು ಹುಡುಕಿ ಕೊಡಿ ಎನಗೆ
ಬಸವರಾಜ ಉಪ್ಪಿನ




