ಕಾವ್ಯ ಸಂಗಾತಿ
ನಿಶ್ಚಿತಾರ್ಜುನ್
ʼಆಷಾಡದ ಒಲವುʼ

ತಂಪು ಗಾಳಿ ಬೀಸಿ…
ಹೇಳಿತು ನನ್ನನ್ನು ಎಬ್ಬಿಸಿ…
ನಿನ್ನೊಲವು ಹೇಳಿದೆ ಪ್ರೀತಿಯ ಒಪ್ಪಿಸಿ…
ಅಪ್ಪಿ ಬಾ ನನ್ನ ಒಡತಿಯ ನೀನು…
ಮತ್ತೆ ಬಂದು ಸೇರು…
ಆ ಅಪ್ಪುಗೆಯಿಂದ ನನ್ನನೆಂದು…
ಸೂರ್ಯನ ಕಿರಣಗಳು ಪ್ರಕಾಶಿಸಿ..
ಹೇಳಿತು ನನ್ನನ್ನು ಎಬ್ಬಿಸಿ…
ನಿನ್ನೊಲವು ಹೇಳಿದೆ ಪ್ರೀತಿಯ ಒಪ್ಪಿಸಿ…
ಅವಳ ಕಣ್ಣ ಕಾಂತಿಯ ಹೊಳಪನ್ನು….
ತುಸು ತಂದು ಸೇರಿಸಿ…
ನೀ ತೆರೆಸು ಈ ನನ್ನ ಕಣ್ಣನ್ನೆಂದು…
ಮಣ್ಣಿನ ಕಂಪು ಸ್ಪರ್ಶಿಸಿ….
ಹೇಳಿತು ನನ್ನನ್ನು ಎಬ್ಬಿಸಿ…
ನಿನ್ನೊಲವು ಹೇಳಿದೆ ಪ್ರೀತಿಯ ಒಪ್ಪಿಸಿ…
ಅವಳಿಟ್ಟ ಹೆಜ್ಜೆಯ ಹಾದಿಯಲ್ಲಿ…
ತುಸುಕಂಪ ನೀ ಸೇರಿಸಿ…
ಅದ ತಂದಿಡು ನೀನು ನನ್ನ ಹೆಜ್ಜೆಯಲ್ಲಿಂದು…
ನೀರಿನ ಅಲೆಯು ಸ್ಪರ್ಶಿಸಿ..
ಹೇಳಿತು ನನ್ನನ್ನು ಎಬ್ಬಿಸಿ…
ನಿನ್ನೊಲವು ಹೇಳಿದೆ ಪ್ರೀತಿಯ ಒಪ್ಪಿಸಿ…
ಅವಳು ಮುಟ್ಟಿದ ನೀರನ್ನು…
ನೀ ನನ್ನ ಹಾದಿಗೆ ಸೇರಿಸಿ…
ಮಾರ್ಪಡಿಸು ಅದ ನನ್ನ ಗುಟುಕಿನ ಹನಿಯಲ್ಲಿ…
ಕನಸು ಕಾಡಿತು ಮನಸ್ಸನ್ನು ಸ್ಪರ್ಶಿಸಿ…
ಹೇಳಿತು ನನ್ನನ್ನು ಎಬ್ಬಿಸಿ….
ನಿನ್ನೊಲವು ಹೇಳಿದೆ ಪ್ರೀತಿಯ ಒಪ್ಪಿಸಿ….
ಅವಳಿರುವಳು ನನ್ನದೇ ಗುಂಗಿನಲ್ಲಿ…
ನೀ ಹಾಡು ಜೋಗುಳವನಲ್ಲಿ…
ಮಲಗುವಳು ಮಗುವಂತೆ ನನ್ನ ಒಡತಿಯಲ್ಲಿ….
ಸದಾ ನನ್ನ ಪ್ರೀತಿಯ ಹಾಡಲ್ಲಿ..
ಅವಳೇ ನನ್ನ ಕಣ್ಣಿಲ್ಲಿ….
————————-
ನಿಶ್ಚಿತಾರ್ಜುನ್





ಹೃದಯವು ತಿಳಿಸಿತು ಮನಸ್ಸು ಸ್ಪರ್ಶಿಸಿ…
ಹೇಳಿತು ನನ್ನನ್ನು ಎಬ್ಬಿಸಿ…
ನಿನ್ನೊಲವಿನ ಗೆಳತಿಯ ಬರಹ ಚಂದ….
ಯೋಚನೆ ಅಂದ….
ಕನ್ನಡ ಕುಲಕ್ಕೆ ಅವಳೊಂದು ಶ್ರೀಗಂಧ….