ಕಾವ್ಯ ಸಂಗಾತಿ
ನಿರಂಜನ ಕೇಶವ ನಾಯಕ
ʼಅಗಣಿತ ದೂರʼ

ಕಿರು ದೂರದಿ,
ಮಿಂಚು ಹುಳವೊಂದು
ತನ್ನ ದಾರಿಯ
ಬಿಡದೇ ಹಿಡಿದಿದೆ.
ಕತ್ತಲೆಯ ಕದವ
ತಟ್ಟುತಲೇ ಅದು
ಅಂಜದೇ ಅಗಣಿತ
ದೂರದಿ ಕಂಡಿದೆ.
ತನ್ನ ಬೆಳಕ
ತಾನೇ ಉರಿಸಿ,
ಉಸಿರ ಕೊನೆವರೆಗೂ
ಉತ್ತರಕೆ ಕಾದಿದೆ.
ಅಗಾಧ ಅಂಧಕಾರದಿ,
ಅರಿತೂ ಮುಳುಗಿ,
ತನ್ನ ಇರುವಿಕೆಗೆ
ಅರ್ಥ ನೀಡಿದೆ.
ತನ್ನ ಗುರಿಯ
ತಾನೇ ಸೃಜಿಸಿ,
ಆತ್ಮ ಬಲದಿ
ತಾನು ಮುನ್ನಡೆದಿದೆ…
ನಿರಂಜನ ಕೇಶವ ನಾಯಕ





ಚಂದದ ಲೇಖನ