ಕಾವ್ಯ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ʼನೀನು ತಾಯಿʼ

ನೀನು ತಾಯಿ
ಬೇರು
ಅವಳು ಮಗಳು
ಚಿಗುರು
ನಿನ್ನ ಕನಸು
ನೆಲದ ಕಸುವು
ಮೇಲೆ ಅರಳಿತು
ಮೊಗ್ಗು ಹೂವು
ಬದುಕು ಕಾನನ
ಪಕ್ಷಿ ಇಂಚರ
ಬಸವ ಮಂತ್ರವು
ಬೆಳಗಿತು
ಅವ್ವ ಎನ್ನುವ
ಮುದ್ದು ಕೂಸು
ಬೆಳೆದು ದೈತ್ಯ
ಮರದ ನೆರಳು
ಹಡೆದ ಒಡಲು
ಪ್ರೀತಿ ಮಡಿಲು
ತುಂಬಿ ಉಕ್ಕಿತು
ಜೀವ ಕಡಲು
———–
ಡಾ ಶಶಿಕಾಂತ ಪಟ್ಟಣ ರಾಮದುರ್ಗ





ಅತ್ಯುತ್ತಮ ಕವನ ಸರ್
ತಾಯಿ ಕನಸು,ಮಗಳು ನನಸು ಮಾಡಿರುವದು
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಸೂಪರ್ ಕವನ
ಅರ್ಥಪೂರ್ಣ ಸಾಹಿತ್ಯ ಸರ್
ಅತ್ಯಂತ ಅಪರೂಪದ ಸುಂದರ ಕವನ ಸರ್
Excellent poem
ತಾಯಿ ಮಗಳ ಬಾಂಧವ್ಯ, ತಾಯಿ ತಾನು ಕಂಡ ಕನಸನ್ನು ಮಗಳು ನನಸಾಗಿಸಿದ ಬಗೆ, ಅದರಿಂದ ತಾಯಿಗೆ ಆದ ಆನಂದದ ಅನುಭೂತಿ, ಧನ್ಯತಾ ಭಾವವನ್ನು ಹಿಡಿದಿಡುವಲ್ಲಿ ಕವಿ ಯಶಸ್ವಿಯಾಗಿದ್ದಾರೆ.