ಕಾವ್ಯ ಸಂಗಾತಿ
ಡಾ. ರೇಣುಕಾ ಹಾಗರಗುಂಡಗಿ
“ಹೃದಯ ವೀಣೆ”

ಹೃದಯ ವೀಣೆ ಶೃತಿ ಸೇರಿ
ಹಾಡುತ್ತಿದೆ ಕೇಳು ಬಾ
ಅದರ ಮಿಡಿತ ತುಡಿತ ಅರಿತು
ನಾವು ಹಾಡೋಣ ಬಾ
ಆಸೆಗಳನು ಹೊಸೆದು ಹೊಸ
ರಾಗ ಕಟ್ಟಿದೆ ಕೇಳು ಬಾ
ಕಿವಿಗೆ ಇಂಪು ನೀಡುತಿಹುದು
ಕೇಳಿ ತಂಪಾಗೋಣ ಬಾ
ಸ್ವರ ಲಯಗಳು ಮೇಳೈಸಿ
ಝೇಂಕರಿಸಿವೆ ಗಾನವಾ
ಜಗದ ಎಲ್ಲ ನೋವ ಮರೆತು
ಆನಂದದೆಡೆಗೆ ಹೋಗೋಣು ಬಾ
ಭಾಷೆಗೆ ಸಿಲುಕದ ವೀಣೆಯು
ಹೃದಯದಿ ಹಾಡುತ್ತಿದೆ ಕೇಳು ಬಾ
ಎಲ್ಲೇ ಮೀರಿದ ಸಂಗೀತ ಶಕ್ತಿಗೆ
ಕೈಮುಗಿದು ನಮಿಸೋಣು ಬಾ
ಸಪ್ತ ಸ್ವರಗಳ ಲೋಕದಲ್ಲಿ
ರೋಮಾಂಚನ ಅನುಭವಿಸು ಬಾ
ನಾದವನ್ನೇ ಧ್ಯೇನಿಸುತ
ಭಾವಪರವಶರಾಗೋಣು ಬಾ
ಹೃದಯ ವೀಣೆ ಶೃತಿ ಸೇರಿ
ಹಾಡುತ್ತಿದೆ ಕೇಳು ಬಾ
ಅದರ ಮಿಡಿತ ತುಡಿತ ಅರಿತು
ನಾವು ಹಾಡೋಣ ಬಾ
ಆಸೆಗಳನು ಹೊಸೆದು ಹೊಸ
ರಾಗ ಕಟ್ಟಿದೆ ಕೇಳು ಬಾ
ಕಿವಿಗೆ ಇಂಪು ನೀಡುತಿಹುದು
ಕೇಳಿ ತಂಪಾಗೋಣ ಬಾ
ಸ್ವರ ಲಯಗಳು ಮೇಳೈಸಿ
ಝೇಂಕರಿಸಿವೆ ಗಾನವಾ
ಜಗದ ಎಲ್ಲ ನೋವ ಮರೆತು
ಆನಂದದೆಡೆಗೆ ಹೋಗೋಣು ಬಾ
ಭಾಷೆಗೆ ಸಿಲುಕದ ವೀಣೆಯು
ಹೃದಯದಿ ಹಾಡುತ್ತಿದೆ ಕೇಳು ಬಾ
ಎಲ್ಲೇ ಮೀರಿದ ಸಂಗೀತ ಶಕ್ತಿಗೆ
ಕೈಮುಗಿದು ನಮಿಸೋಣು ಬಾ
ಸಪ್ತ ಸ್ವರಗಳ ಲೋಕದಲ್ಲಿ
ರೋಮಾಂಚನ ಅನುಭವಿಸು ಬಾ
ನಾದವನ್ನೇ ಧ್ಯೇನಿಸುತ
ಭಾವಪರವಶರಾಗೋಣು ಬಾ
————-
ಡಾ. ರೇಣುಕಾ ಹಾಗರಗುಂಡಗಿ




