ಕಾವ್ಯಸಂಗಾತಿ
ಡಾ ಡೋ ನಾ.ವೆಂಕಟೇಶ
ಧಾರ್ಷ್ಟ್ಯ

ಕನಸಲ್ಲಿ ಕಂಡ ಹಾಗಲ್ಲ
ಜೀವನದ ಧಾರ್ಷ್ಟ್ಯ
ಬದುಕಿನ ಧಾಪು
ಮತ್ತದೇ ಛಾಪು ಮೂಡಿಸಿದ
ನೆರಳು
ಬೆಳಕಿನ ಬೆಂಕಿ
ನಲ್ಲೆ –
ಇಳಿ ವಯಸ್ಸಿನ ಹಲ್ಲೆ !
ಬದುಕು ಬದುಕಿದ್ದು ಸಾಕೋ
ಮುಂದಿನ ಜನ್ಮಕ್ಕೂ ಬೇಕೋ
ಜೀವನ ಕಲಿಸಿದ್ದು ಇಷ್ಟೇ –
ಮುಂದಿನ ಕ್ಷಣ ನವ ನವೀನ
ತಂತ್ರಜ್ಞಾನದ ವಿನ್ಯಾಸ .
ಬರೆಯಲಾರಂಭಿಸಿದ ಕವನ
ಮುಗಿಯುವಾಗಾಗಲೇ
ಕಥೆ
ವ್ಯಥೆಯಾಗುವ ಹಕೀಕತ್ತು
ನನ್ನ ಮಗ ಹುಟ್ಟುವಾಗಿಂದ
ಬಂಧ ಅನುಬಂಧಕ್ಕೆ .
ಮೊಮ್ಮಗ ಹೂಡಿದ ತೀಕ್ಷ್ಣ
ಬಾಣ ಸೀದಾ
ಆಂಡ್ರೊಮಿಡಾ ಗ್ಯಾಲಕ್ಸಿ !
ತಿಳುವಳಿಕೆಯಲ್ಲಿ ನಾನೊಂದು ಗ್ರಹ
ತಾರೆಯರ ತಾಳಕ್ಕೆ ಕುಣಿವ
ಕ್ಷುದ್ರಗ್ರಹ
ಬ್ರಹ್ಮಾಂಡದ ಅಣುವಲ್ಲಿ
ಬೃಹತ್ ನಾಟಕ
ಸೂರ್ಯ ಚಂದ್ರ
ರಾತ್ರಿ ಹಗಲುಗಳ ಮಿಲನ
ಜೀವನಕ್ಕೆನ್ನೆಷ್ಟು ಧಾರ್ಷ್ಟ್ಯ
ಬದುಕಿಗಿನ್ನೆಷ್ಟು ಸೊಕ್ಕು ಸವಲತ್ತು
———————–
ಡಾ ಡೋ ನಾ.ವೆಂಕಟೇಶ





ಸುಂದರ ಕವನ ವೆಂಕಟೇಶ್.
ಧನ್ಯವಾದಗಳು ಮಂಜುನಾಥ್.
Very nice
Thank you.
Super
Thank you