ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
ʼಚಹರೆಯಿಲ್ಲದವರುʼ

ಮುಖವಾಡ ಹೊತ್ತವರು ಜಗದ ಆಟ ಕಟ್ಟುವವರು ನಿಯಮಿತರು
ಮುಖವಾಡ ಇಲ್ಲದೇಮುಖವಾಡ ಹಾಕುವವರು ಅನಿಯಮಿತರು
ಒಳಗೊಂದು ಬಣ್ಣವಲ್ಲದ ಬಣ್ಣ
ಹೊರಗೆ ಹನ್ನೊಂದು ಸುಣ್ಣಬಣ್ಣ
ಏನೆಂದು ಕುಣಿಯಲೀ
ಈ ತಾಳಕ್ಕೆ ಈ ಮೇಳಕ್ಕೆ
ಬಂದಾಗ ಇರಲಿಲ್ಲ ಬಣ್ಣ
ಹೋಗುವಾಗ ಬರೆ ನಿರ್ಬಣ್ಣ
ಬಂದು ಹೋಗುವ ಮಧ್ಯೆ
ಬರೆ ಮುಖವಾಡ ಗಳು
ಚೆಹರೆಯೇ ಇಲ್ಲದವರು!
ಡಾ ಡೋ ನಾ ವೆಂಕಟೇಶ





Nice Bhavoji
ಬಹಳ ಅರ್ಥಪೂರ್ಣವಾಗಿದೆ ಈ ಕವಿತೆ.
Thank you Manjunath
Thank you
ಚಿಕ್ಕದಾದ, chokkavada kavithe
ಧನ್ಯವಾದಗಳು
ಕೆಲವೇ ಶಬ್ದಗಳಲ್ಲಿ
ಜೀವನವ ಬಣ್ಣಿಸಿರುವ ಪರಿ
ಬಹು ಸೊಗಸಾಗಿದೆ.
ಧನ್ಯವಾದಗಳು