ಕಾವ್ಯ ಸಂಗಾತಿ
ಗೀತಾ.ಜಿ.ಎಸ್
ತುಂಬಿ ಹರಿದಾವ ಹೊಳೆಹಳ್ಳ

ಹೊತ್ತಲ್ಲದ ಹೊತ್ತಿನಲ್ಲಿ ಬೆಂಬಿಡದೆ
ಸುರಿವ ಹುಚ್ಚು ಮಳೆಗೆ
ಕೊಚ್ಚಿ ಹೋದವು ಹೊಲಗಳು
ತುಂಬಿ ಹರಿದವು ಹಳ್ಳಕೊಳ್ಳಗಳು
ಮೃಗಶಿರ ಮಳೆ ಮುಗಿದು
ಆರಿದ್ರಾ ಮಳೆ ಶುರುವಾದರೂ
ಬಿಡದ ಜಡಿ ಮಳೆಗೆ
ರಾಡಿಯಾದವು ಹೊಲ ಗದ್ದೆಗಳು..
ರೈತನ ಮೊಗದಲ್ಲಿ ಆತಂಕದ ಛಾಯೆ
ತಿಂಗಳೊಪ್ಪತ್ತು ಕಳೆದರೂ
ಬಿತ್ತನೆ ಕಾಣದ ಇಳೆ
ಅತಿವೃಷ್ಟಿಗೆ ಹೆದರಿ ಮೊಗದಲ್ಲಿ ಇಲ್ಲ ಕಳೆ.

ವಸುಂಧರೆಯ ಒಡಲು ತುಂಬಿದೆ
ಪ್ರಕೃತಿಯೆಲ್ಲಾ ಹಸಿರು ಹೊದ್ದಿದೆ
ರೈತರ ಮೊಗದಲ್ಲಿ ಸಂತಸ ಉಕ್ಕಿದೆ
ಹೊಟ್ಟೆ ತುಂಬಲು ಬೆಳೆ ಬೆಳೆಯಬೇಕಿದೆ..
ವರುಣದೇವಾ ಕೃಪೆದೋರು
ಜಗಕ್ಕೆಲ್ಲಾ ಅನ್ನ ಬೆಳೆಯುವ ರೈತರಿಗೆ
ಬಿಡುವು ಮಾಡಿ ದಾರಿ ಬಿಡು
ಭೂಮಿಯ ಹಸನಾಗಿಸಿ
ಬಂಗಾರದ ಬೆಳೆ ಬೆಳೆಯೋಣ..
ಗೀತಾ.ಜಿ.ಎಸ್





ಅತ್ಯುತ್ತಮ ಕವನ ಗೀತಾ
Adbutha Madam