ಕಾವ್ಯ ಸಂಗಾತಿ
ಸುಧಾ ಪಾಟೀಲ್
ಕವನವಲ್ಲವೇ?

ಮನದ ಭಾವಗಳ
ಗುನುಗುನುವಿಕೆ
ಒಳಗಣ ಮಾಧುರ್ಯಗಳ
ಸಮ್ಮಿಲನ
ಇರಿಸು ಮುರಿಸುವಿನ
ಧೋರಣೆಯ ಎಳೆಗಳು
ಕವನವಲ್ಲವೇ
ಆಗಾಗ ಮನವ ಕಾಡುವ
ತೇಲಿ ಮರೆಯಾಗುವ
ಅಲ್ಲಲ್ಲಿ ಮಿನುಗುವ
ಪ್ರೀತಿಯ ಹೊಳಹುಗಳನ್ನು
ಚೆಲ್ಲುವ
ಮನವ ಸಂತೈಸುವ
ಸುಳಿಗಾಳಿಗಳು
ಕವನವಲ್ಲವೇ
ಮೇಘದೂತ ಕಳಿಸಿದ
ತುಂತುರು ಸಂದೇಶಗಳು
ಕತ್ತಲಲ್ಲಿ ಮಿಣುಕು ಹುಳುಗಳಂತೆ
ಮಿಂಚಿ ಮರೆಯಾಗುವ
ದೀಪದ ತುಣುಕುಗಳು
ಕವನವಲ್ಲವೇ
ಭರವಸೆಯ ಮಾತುಗಳು
ಮನವ ದುಂಬಿ
ರಾಗ-ತಾಳವ ಮೀರಿ
ದುಂಧುಬಿಯಾದಾಗ
ಭೋರ್ಗರೆದು
ಜಲಪಾತವಾದಾಗ
ಅದೇ ಕವನವಲ್ಲವೇ
ಸುಧಾ ಪಾಟೀಲ್





ಅದ್ಬುತ ಕವನ very nice
Excellent poem