ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ʼಪ್ರೀತಿ ಕಡಲುʼ

ಉಕ್ಕಿ ಹರಿದಿದೆ ಪ್ರೀತಿ ಕಡಲು
ತೆರೆಯು ಮುತ್ತಿಕ್ಕಿ ದಡಕೆ
ನಕ್ಕು ತೆರೆದಿದೆ ಎದೆಯ ಬಾಗಿಲು
ಕರೆದ ಒಲವಿನ ಮೋಹಕೆ
ಸೊಕ್ಕಿ ಮೆರೆದಿದೆ ಬಯಕೆ ಕಾವು
ತಂಗಾಳಿ ಬೀಸಿದ ರಭಸಕೆ
ಬಿಕ್ಕಿ ಅಳುತಿದೆ ಒಡಲ ಭಾವವು
ಮುಗಿಲು ಮುಟ್ಟಿದೆ ಕೋರಿಕೆ
ಹಕ್ಕಿ ಹಾರುತಿದೆ ಬಾನಿನಗಲಕೆ
ಬಿಚ್ಚಿ ಗರಿಯ ಮೇಲಕೆ
ಏಕೆ ಮೌನವು ಹೇಳು ಮೋಡವೇ
ಹಚ್ಚಿ ಕೆಂಪನು ಲೋಕಕೆ
ರೆಕ್ಕೆ ಮುರಿದು ಜಾರಿ ಬಿದ್ದಿತು
ಭೂಮಿ ತಾಯಿಯ ಮಡಿಲಿಗೆ
ಮೂಕ ರೋಧನೆ ಹೃದಯದೊಳಗೆ
ಭಾಷ್ಪವು ಶೋಕ ಗೀತೆಗೆ
ಅನುರಾಧಾ ರಾಜೀವ್ ಸುರತ್ಕಲ್





ಭಾವಪೂರ್ಣ…