ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
ʼವ್ಯತಿರಿಕ್ತರುʼ

ಇರಲೆಮಗೆ ಅಡಿಗಡಿಗೂ ತುಸು ಎಚ್ಚರ
ಕಾಲೆಳೆಯುವ ಜನರೇ ಇರುವರು ಹತ್ತಿರ
ಆದರೂ ತುಸು ಗರ್ವ ನಮಗಿರಲಿ
ಅವರಿಗಿಂತ ಮೇಲಿಹೆವೆಂಬ ಹೆಮ್ಮೆಯಿರಲಿ
ಹೆಜ್ಜೆಹೆಜ್ಜೆಗೂ ಗುಂಡಿ ತೋಡುವವರಿದ್ದಾರೆ
ಎದುರಿಸಿ ನಿಲ್ಲಲಾರದ ಹೇಡಿಗಳಿದ್ದಾರೆ
ಅದಕೂ ನಮ್ಮ ಮನ ಸಂತೋಷಿಸಲಿ
ಎದುರಿಸಲಾಗದವರ ಕುತಂತ್ರಕ್ಕೆ ಮನ ಮರುಗಲಿ
ನಮ್ಮ ಪ್ರತಿ ಗೆಲುವನ್ನು ಹೀಗಳೆವವರಿದ್ದಾರೆ
ಒಳಗೊಳಗೇ ಕೊರಗುವವರೂ ಇದ್ದಾರೆ
ಆ ಕ್ಷಣವನ್ನೂ ಬೇಸರಿಸದೆ ಸಂಭ್ರಮಿಸೋಣ
ಅಭಿನಂದಿಸಲಾಗದವರ ಕಂಡು ಮರುಗೋಣ
ನಮ್ಮ ಶ್ರಮಕ್ಕೆ ಮಸಿ ಬಳಿಯುವವರಿದ್ದಾರೆ
ವ್ಯಕ್ತಿತ್ವಕ್ಕೆ ಧಕ್ಕೆ ತರುವವರೂ ಇದ್ದಾರೆ
ಅವರಂತಾಗದೆ ಸಾಧಿಸೋಣ ಮುನ್ನಡೆಯುತ
ವ್ಯತಿರಿಕ್ತ ಮನಸ್ಥಿತಿಗೆ ಸಂತಾಪ ಸೂಚಿಸುತ
——————
ಮಧುಮಾಲತಿರುದ್ರೇಶ್





ತುಂಬು ಧನ್ಯವಾದಗಳು ತಮಗೆ
ತುಂಬಾ ಅದ್ಭುತವಾದ ಕವನ ತಮಗೆ ತುಂಬು ಹೃದಯದ ಅಭಿನಂದನೆಗಳು