ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಡೆಯುವ ದಾರಿ ಒಂದೇ ಆಗಿತ್ತು ,
ಸ್ವಲ್ಪ ದೂರ ನಡೆದಾಗ ಕವಲೊಡೆಯಿತು .
ಇಬ್ಬರ ದಾರಿಯೂ ಬೇರೆ ಬೇರೆಯಾದವು ,  
 ಮೆಲ್ಲಗೆ ಮೌನದಿ ……

ನೀ ಹೋದೆ ನಿನ್ನ ದಾರಿಯಲಿ,
ನಾ ಬಂದೆ ನನ್ನದೆ ದಾರಿಯಲಿ ,
ಬಹು ದೂರ ನಡೆದೆವು, ನಮ್ಮಷ್ಟಕ್ಕೆ ನಾವು ,
 ತುಸು ಮೌನದಿ …..

ಆಕಸ್ಮಿಕ ಎಂಬಂತೆ  ,  
ಬಾಳ ದಾರಿಯ ತಿರುವಿನಲ್ಲಿ ,
ಮತ್ತೆ ಭೇಟಿಯಾದೆವು ,
ಮತ್ತದೇ ಮೌನದಿ …..

ಅನಿವಾರ್ಯಕ್ಕೂ , ಅವಶ್ಯಕ್ಕೋ,
ಸಾಗಬೇಕಿತ್ತು ಪ್ರಯಾಣ ,
ಇನ್ನು ಮುಂದೆ ಒಂದೇ ದಾರಿಯಲ್ಲಿ ,
ಆದರೆ , ಮತ್ತೂ ಅದೇ ಮೌನದಿ ….

ಮೊದಲಿನ ನೀ ಇಲ್ಲ ,
ಮೊದಲಿನ ನಾನೂ ಇಲ್ಲ ,
ಸಾಗಬೇಕಿದೆ ಅಷ್ಟೆ  ,
ಇನ್ನೂ ಅದೇ ಮೌನದಿ …..

ನಿನಗಂಟಿದ ನಂಟೆ ಬೇರೆ ,
ನನಗಂಟಿದ ನಂಟೆ ಬೇರೆ ,
ಮೌನದ ಹೊರತು,
ಈಗಿಲ್ಲ ಇಬ್ಬರ ನಡುವೆಯೂ
ಯಾವ ಭಾವದ ನಂಟು ….

ಕವಲೊಡೆದದ್ದು ಬರೀ ದಾರಿಯಲ್ಲ ,
ಮನದ ಭಾವಗಳು ಸಹ ,
ಅಂದೆ ಕೊನೆ ಉಸಿರೆಳೆಯುತ್ತ ,  
ಮೌನದಿ ……


About The Author

1 thought on “ಪರವಿನ ಬಾನು ಯಲಿಗಾರ ಅವರ ಕವಿತೆ,”ಕವಲೊಡೆದ ಭಾವ “”

Leave a Reply

You cannot copy content of this page

Scroll to Top