ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್

ಮನಸಲ್ಲಷ್ಟೇ ಅಲ್ಲ ಕನಸಲ್ಲೂ ನಾನೇ ಇರಬೇಕು
ನೆನಪಲ್ಲಷ್ಟೇ ಅಲ್ಲ ನೆಪದಲ್ಲೂ ನಾನೇ ಇರಬೇಕು
ಸ್ವಾರ್ಥದ ತೀರ್ಥವಿದು ಕಣ್ಣಿಗೊತ್ತಿ ಕುಡಿದು ಬಿಡು
ಜತೆಯಲ್ಲಷ್ಟೇ ಅಲ್ಲ ಕತೆಯಲ್ಲೂ ನಾನೇ ಇರಬೇಕು
ಅಷ್ಟಕಷ್ಟೇ ಇದ್ದರದು ಸ್ಪಷ್ಟವಾಗದೇ ಉಳಿದೀತು
ಇಷ್ಟದಲ್ಲಷ್ಟೇ ಅಲ್ಲ ಕಷ್ಟದಲ್ಲೂ ನಾನೇ ಇರಬೇಕು
ಎದೆಗೆ ಕಿವಿಯಿಟ್ಟು ಕೇಳಬೇಕು ಹೃದಯದ ಹಾಡು
ಮುದ್ದಿನಲ್ಲಷ್ಟೇ ಅಲ್ಲ ಸದ್ದಿನಲ್ಲೂ ನಾನೇ ಇರಬೇಕು
ನೀ ಕುಣಿದಾಗಲಷ್ಟೇ ಈ ಮೈ ಮನ ತಣಿಯುವದು
ಹೆಜ್ಜೆಯಲ್ಲಷ್ಟೇ ಅಲ್ಲ ಗೆಜ್ಜೆಯಲ್ಲೂ ನಾನೇ ಇರಬೇಕು
ಕುಂಬಾರನ ಮನೆ-ಮನ ಬೆಳಗಲೆಂದು ಬಂದಿರುವೆ
ಬೆಳಕಿನಲ್ಲಷ್ಟೇ ಅಲ್ಲ ಕತ್ತಲಲ್ಲೂ ನಾನೇ ಇರಬೇಕು