ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇವನ  ವಿನಹ :ಇರುಳಿನಲ್ಲಿ ಅರಳಿ ನಿಂತ ಪಾರಿಜಾತ ಈಕೆ
 ಸದಾಕಾಲ ಕತ್ತಲಲ್ಲಿ ಅರಳಿ ಅರಳುವ ಚಂದ್ರಿಕಾ!
 ಇರುಳ ಭಾಷೆಗೆ,ಭಾಷೆ ಒಂದು ಸಾಕ್ಷಿಯಂತೆ ನಿನ್ನ ಅಂದದ ಈ ಬದುಕಿಗೆ
 ಹಳ್ಳ-ಕೊಳ್ಳ ಸೇರಿಸಿಕೊಂಡು ಹೊಳೆಯಾಗಿ, ಹೊಳೆ -ಹೊಳೆದು ಪ್ರೀತಿ 

ಸಂಜ್ಞೆಗೆ ಸಹಿಯ ಹಾಕಿ ಸಾಗರ ಸೇರುವ ತವಕ!
 ಕಂಡ ಕನಸು ಮತ್ತೆ-ಮತ್ತೆ ಕಾಡಿದಾಗ ನೆನಪು ಒಂದು ಮಜುಕೂರಕ!
 ನಾಲ್ಕು ಕಣ್ಣು ದೃಷ್ಟಿ ಒಂದು ಮೂಡಿತೊಂದು ಮನದ ಬಿಂಬಕ!
 ಅಧರಾಮೃತ ಸೇರಿದಾಗ ಮಧುರ ಚುಂಬಕ!
 ಬೆರಳು ಬೆವರು ನೆರಳು ಒಂದಾದಾಗ ಸ್ಪರ್ಶ ಸುಖ!
 ಉಸಿರ ಉಸಿರಲ್ಲಿ ಸೇರಿದಾಗ
 ಬದುಕು ಒಂದು ತೆರೆದ ಪುಸ್ತಕ
 ಸಖಿಯ ಈ ಗೀತೆಗೆ ಸಾಕ್ಷಿಯಾದ ಒಡಲಸಖ!
 ಬೆರೆತ ಉಸಿರ ಒಡಲ ನಿಲಯ ಬಾಗಿಲೊಂದು ಮುಚ್ಚಿದಾಗ
 ಆಸೆ- ಹೂವಿಗೆ, ಇರುಳ ಭಾಷೆಗೆ, ಭಾಷೆ ಒಂದು ಸಾಕ್ಷಿಯಾಗಿ ಹೃದಯದಲ್ಲಿ ಮೂಡಿಸಿತೊಂದು ನಡಕ .

————

About The Author

Leave a Reply

You cannot copy content of this page

Scroll to Top