ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹುಟ್ಟಿದಾಗ ಹೆಸರಿಲ್ಲ
ಸತ್ತಾಗ ಉಸಿರಿಲ್ಲ
ಮಣ್ಣಲ್ಲಿ ಮಣ್ಣಾಗಿ
ಮರೆಯಾಗುವ ಜೀವವೇ,
ಆಡಂಬರದ ಈ ಬದುಕು ಎಷ್ಟು ದಿನ..!

ಸಿರಿ ಸಂಪತ್ತನು ಗಳಿಸುತ
ಬಂಧಗಳ ಬೆಸೆಯುತ
ಕೊನೆಗೊಮ್ಮೆ ಉಲ್ಕೆಯಂತೆ
ಉರಿದು ಬೂದಿಯಾಗುವ ಜೀವವೇ,
ಆಡಂಬರದ ಈ ಬದುಕು ಎಷ್ಟು ದಿನ..!

ನಿನ್ನದೆಂಬುದು ಏನಿಲ್ಲವಿಲ್ಲಿ
ಚದುರಂಗದಾಟದಿ ಕಾಯಿಗಳಾಗಿ
ಸೋಲು ಗೆಲುವುಗಳ ನೋಡುತ
ಸುಖಕ್ಕಾಗಿ ಹಪಿಸುವ ಜೀವವೇ,
ಆಡಂಬರದ ಈ ಬದುಕು ಎಷ್ಟು ದಿನ…!

ಪರರ ಮನೆಯ ತೂತುಗಳನೆಣಿಸಿ
ಕೈಗೊಂಬೆಯಾಗಿ ಮತ್ತೊಬ್ಬರ ಕುಣಿಸಿ
ಎಲ್ಲವೂ ನನಗಿರಲೆನ್ನುವ ಜೀವವೇ,
ಆಡಂಬರದ ಈ ಬದುಕು ಎಷ್ಟು ದಿನ…!

ಅಲ್ಪಮತಿಯಾಗಿ ಅಲೆಯುತ್ತ
ಗರ್ವವನು ತೋರಿ ಮೆರೆಯುತ್ತ
ಮುಕ್ತಿ ಸಿಗದೆ ತಿರುಗಿ ಕಳೇಬರವಾಗಿ
ನರಳುವ ಜೀವವೇ,
ಆಡಂಬರದ ಈ ಬದುಕು ಎಷ್ಟು ದಿನ…!

ಬೊಮ್ಮ ಗೀಚಿದ ಬರಹವನಳಿಸಲಾಗದು
ಬಂದದ್ದನ್ನು ಅನುಭವಿಸದೆ ಹೋಗಲಾರದು
ಇದ್ದದ್ದನ್ನು ಉಂಡುಟ್ಟು ಸರ್ವರ
ಒಳಿತನು ಬಯಸದೆ ಸಾಗುವ ಜೀವವೇ,
ಆಡಂಬರದ ಈ ಬದುಕು ಎಷ್ಟು ದಿನ..!

About The Author

Leave a Reply

You cannot copy content of this page

Scroll to Top