ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀವು ನನಗ್ಯಾರಿರಬಹುದೆಂದು ಎಷ್ಟೋ ಬಾರಿ
ನನಗೆ ನಾನೇ ಕೇಳಿಕೊಂಡಿದ್ದೇನೆ
ರಕ್ತ ಸಂಬಂಧವಂತೂ ಅಲ್ಲ,
ಅದ್ಯಾವ ನಂಟಿರಬಹುದೆಂದು ಅಂದುಕೊಂಡಿದ್ದೇನೆ

ಮನಸುಗಳು ಜಾತಿ, ಧರ್ಮ, ಭಾಷೆಗಳ
ಹೆಸರಲಿ ದೂರವಾಗಿವೆ ಇಲ್ಲಿ
ಅದ್ಯಾವುದೂ ನಮ್ಮ ಬಾಂಧವ್ಯಕೆ
ಅಡ್ಡಿಯಾಗಲಿಲ್ಲವೆಂದು ಅಚ್ಚರಿಗೊಂಡಿದ್ದೇನೆ

ಪರಸ್ಪರ ಪ್ರೀತಿ ,ಗೌರವ , ವಿಶ್ವಾಸಗಳೆಲ್ಲವೂ
ಬಲು ದುಬಾರಿಯಾಗಿರುವ ಕಾಲವಿದು
ಹೀಗಿರುವಾಗ ನಾವ್ಹೇಗೆ ಬಹು ವರ್ಷಗಳಿಂದ
ಜೊತೆಯುಳಿದೆವೆಂದು ದಿಗ್ಬ್ರಮೆಗೊಂಡಿದ್ದೇನೆ

ನಮ್ಮಲ್ಲಿಯೂ ಭಿನ್ನಾಭಿಪ್ರಾಯಗಳು
ಇಣುಕುವುದುಂಟು ಆಗಾಗ ಗೆಳೆಯರೇ
ಆದರೂ ದೂರಾಗುವ ದೂರಾಲೋಚನೆಯೂ
ಸುಳಿಯಲಿಲ್ಲ ಎಂದು ಸಂತಸಗೊಂಡಿದ್ದೇನೆ

ಅಳಿಯದ ಬಾಂಧವ್ಯ , ಆತ್ಮಗಳ ಮಿಲನ
ದೇವರೇ ಹೆಣೆದ ಸ್ನೇಹ ಸಂಬಂಧವಿದು ವಾಣಿ
ಜಗವು ಜೊತೆಯಿರದಿದ್ದರೂ ನನ್ನೊಂದಿಗೆ
ಎಂದಿಗೂ ನೀವಿರುವಿರೆಂದು ನೆಚ್ಚಿಕೊಂಡಿದ್ದೇನೆ


About The Author

Leave a Reply

You cannot copy content of this page

Scroll to Top