ಎಮ್ಮಾರ್ಕೆ ಅವರ ಕವಿತೆ-ಕರ್ಮಯೋಗಿ ಕಾರ್ಮಿಕ
ನಿತ್ಯ ದುಡಿವಂತ ಶ್ರಮಿಕ
ಬೆವರ ಹನಿಯ ಮಾಲೀಕ
ಬಿಡನೆಂದಿಗೂ ಕಾಯಕ
ಇವನ ಹೆಸರೇ ಕಾರ್ಮಿಕ
ಕಾಯಕದಲ್ಲೇ ಕೈಲಾಸ
ಅಂದ್ರು ಬಸವಣ್ಣ,
ಕೈಲಾಸ ಪಡೆದ ನೀವು
ಎಂದೂ ಗಟ್ಟಿ ಚಿನ್ನ,
ನಿಮ್ಮಿಂದಲೇ ಲೋಕದ
ಕಷ್ಟವು ಅಳಿವುದು,
ಲೋಕಕೆ ಅಂಟಿರುವ
ಕೊಳೆಯು ತೊಳೆವುದು.
ಕೂತು ಉಂಡರೆ ಕುಡಿಕೆ
ಸಾಲದೆಂಬುವನೀತ,
ಕಾಯಕವೇ ಕೈ ಹಿಡಿವ
ದೇವರೆಂದವನೀತ,
ಕಾರ್ಮಿಕರ ಕಷ್ಟಗಳಲಿ
ಕೈಯ ಜೋಡಿಸೋಣ,
ಅವರಂತೆ ಶ್ರಮ ಗುಣವ
ಮೈಗೂಡಿಸಿಕೊಳ್ಳೋಣ.
ದುಡ್ದಷ್ಟೇ ಕೂಲಿ ಪಡೆವ
ಪರಮ ಪ್ರಾಮಾಣಿಕನು,
ಮೈ ಮುರಿದು ದುಡಿವ
ನಿಜ ಕರ್ಮಯೋಗಿಯು,
ಪರಿಶ್ರಮವೇ ಪರಮಾತ್ಮ
ಎಂದರಿತು ಬಾಳುವ,
ಪ್ರಪಂಚಕ್ಕೆಲ್ಲ ಕಾರ್ಮಿಕರ
ಕುರಿತಾಗಿ ಹೇಳುವ.
ಎಮ್ಮಾರ್ಕೆ
ಎಮ್ಮಾರ್ಕೆ ಅವರ ಕವಿತೆ-ಕರ್ಮಯೋಗಿ ಕಾರ್ಮಿಕ Read Post »



