ಕಾವ್ಯ ಸಂಗಾತಿ
ಶಾರದಜೈರಾಂ.ಬಿ ಅವರ ಕವಿತೆ-
“ಮುಗ್ದತೆ ಮಾಸದಿರಲಿ”

ಇಬ್ಬರು ಪರಿಚಿತರಲ್ಲ
ಆದರೂ ನಗೆ ಬೀರಿದರು
ಒಬ್ಬರು ಮುಸ್ಲಿಂ ಇನ್ನೋಬ್ಬರು ಹಿಂದೂ ಅದರ ಗೊಡವೆಯಿಲ್ಲ
ಮಕ್ಕಳಿಗೆ
ಇಬ್ಬರು ಕೈ ಕುಲುಕಿದರು
ಕೈಲಿದ್ದ ಚಿಪ್ಸ್ ತೆಗೆದಿಕೋ
ಎಂದು ನೀಡಿತು
ಇನ್ನೊಂದು ಎಂದಾಗ
ಮತ್ತೆ ನೀಡಿತು ಮಗು
ನಿಷ್ಕಲ್ಮಶ ನಿರ್ಮಲ ನಗೆ
ಮುಗ್ದತೆಯ ಕಂದಮ್ಮಗಳು
ಮಣ್ಣಿನದ್ದೆ ಆಗಲಿ ಮಾಣಿಕ್ಯವಾಗಲಿ
ಮೌಲ್ಯ ಅರಿಯದೇ ಸಂತಸವಷ್ಟೇ
ಮಕ್ಕಳದ್ದು
ಎಲ್ಲರೆಡೆಯೂ ನಗೆ ಬೀರುತ
ಗಮನ ಸೆಳೆದ ಮುಗ್ದತೆ
ನಮಗದೇಕೆ ಬಾರದು
ತುಸು ನಗುತ ವಸಿ ಬೆರೆತು
ಸೌಹಾರ್ದತೆಯಿಂದ ಸಾಗೋಣ
ಮಕ್ಕಳಿಂದ ಕಲಿಯುವುದು ಸಾಕಷ್ಟಿದೆ
ಆದರೂ ಕಾಪಿಟ್ಟುಕೊಳ್ಳೋಣ
ಕನಸುಗಳನ್ನು
ವರುಷಗಳೇ ಉರುಳಲಿ
ಬಾಳಲಿ ಮುಗ್ದತೆ ಮಾಸದಿರಲಿ
ಮಗುವಂತೆ ಒಮ್ಮೆ ಸಾಧ್ಯವಾದರೆ
ಇರುವ ಚಿಂತೆ ಮರೆತು ನಕ್ಕುಬಿಡಿ
ಭರವಸೆಯ ನಾಳೆಗಳಿವೆ.————–

ಶಾರದಜೈರಾಂ.ಬಿ
ಶಾರದಜೈರಾಂ.ಬಿ



