ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಸಿರಾಗುವುದೆಂದರೆ ಸುಮ್ಮನೆಯೇ?
ಅದಕ್ಕೂ ನಿಟ್ಟುಸಿರು ಬಿಡಬೇಕಲ್ಲವೇ?
ಗೋಡೆ ಕಾವಲಾಗಿರಬೇಕು ಕಿಟಕಿ
ಮುಚ್ಚಿ ಕೊಳ್ಳಬೇಕು…

ಬೆಳ್ಳಕ್ಕಿ ಸಾಲು ಒಗ್ಗಟ್ಟಿಗೆ ಬಲ ತುಂಬಬೇಕು; ಹೊಲದ ಬದುವಿನ
ಹುಲ್ಲು ದನ ಮೇಯ್ಯಲು ಬೇಕು
ಉಸಿರಿಗೆ ಉಸಿರು ತಾಗಬೇಕು…

ಬಸಿರೆಂದರೆ ಬಯಕೆ, ಪ್ರೀತಿ ಅದಕ್ಕೂ ಮಿಕ್ಕಿ ಹೊಂದಾಣಿಕೆ;
ಮಾತಿನಲಿ ಮಮತೆ ಇರಬೇಕು;
ತುತ್ತಿನಲಿ ಕಕ್ಕುಲಾತಿ ಕಾಣಬೇಕು…


About The Author

Leave a Reply

You cannot copy content of this page

Scroll to Top