ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

1-
ಸುಡು ಬಿಸಿಲು
ಉರಿಬಿಸಿಲು
ಬಯಲು ಸುಡುತ್ತಿದೆ
ನಾಲ್ಕು ಹನಿ ಉದುರಬೇಕಿತ್ತು
ಪ್ರೀತಿಯಂತೆ
…ದೂರವಾದೆ
ಬಿಸಿಲು ಉಲ್ಬಣಿಸಿದೆ

-2-
ಉರಿ ಬಿಸಿಲ ದಾರಿ
ದಾರಿಯಲ್ಲಿ ಕಂಡವರು
ನಕ್ಕರು, ಮಾತಾಡಿದರು
ಆದರೂ
ಸಮಾಧಾನವಾಗಲಿಲ್ಲ

ಉರಿ ಬಿಸಿಲಿನದ್ದೇ ಮಾತು
ಒಂದು ಹನಿ ಪ್ರೀತಿಗಾಗಿ
ಎಲ್ಲರದ್ದೂ ಹುಡುಕಾಟವೇ
ಬಿಸಿಲಿನ  ಅರ್ಥ
ಇಮ್ಮಡಿಸಿತು

-3-
ಭೂಮಿ ತಲ್ಲಣಿಸಿದೆ
ಕಾವ್ಯ ಕಾಣೆಯಾಗಿದೆ
ನೀನು ಹೋದ ಮೇಲೆ
ಯಾರಿಗೆ ಬೇಕು ಈ ಕಾವ್ಯ ?


ಅಕ್ಷರಗಳು ಸಹ
ಬಿಸಿನ ದಾಹಕ್ಕೆ
ಬಳಲಿವೆ

-4-
ನದಿ ದಂಡೆಗೆ ಬಂದೆ
ನದಿ  ಬಾಯರಿಕೆ ಎಂದಿತು
ಕಡಲದಡಕ್ಕೆ ಬಂದೆ
ಅದು ಸಹ ಅಬ್ಬರಿಸಿತು
ಮೋಡ ಕಟ್ಟುವ ಮುಗಿಲಿಗಾಗಿ
ಕಾದಿದ್ದೇನೆ ಎಂದಿತು
ನನ್ನದು
ನಿನ್ನ ಹಸಿವೆಯೇ ಎಂದು
ಮೌನಿಯಾದೆ


About The Author

3 thoughts on “ಕಾವ್ಯದಿನಕ್ಕೊಂದುಕವಿತೆ- ನಾಗರಾಜ್ ಹರಪನಹಳ್ಳಿ”

Leave a Reply

You cannot copy content of this page

Scroll to Top