ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಎಲ್ಲದರ ಮೇಲೂ ಸ್ವಾಮ್ಯ ಸಾಧಿಸಿ ಚಂದ್ರ ಲೋಕಕ್ಕೂ ಹೋಗಿ ಅನೇಕ ಆವಿಷ್ಕಾರಗಳನ್ನು ಮಾಡಿ  ಜಗತ್ತನ್ನೇ ಬೆರಗುಗೊಳಿಸುವನು  ಮಾನವ. ಅವನ ಸಾಧನೆ ರೋಧನೆ ಎಲ್ಲಕ್ಕೂ ಪೂರಕವಾದ ಶಕ್ತಿಯೊಂದಿದೆ ಅದೇ ಅವನ ಮನಸ್ಸು. ಎಲ್ಲಾ ಅಡೆತಡೆಗಳನ್ನು ದಾಟಿ ಸಾಧನೆಯತ್ತ  ಮೊನ್ನೆಡೆಯುತ್ತೇನೆಂದರೆ ಅದಕ್ಕೆ ಕಾರಣ ಮನಸು  ದುಃಖದ ಕೂಪದಲ್ಲಿ ಮುಳುಗಿ ಭಗವಂತ ಕೊಟ್ಟ ಬದುಕನ್ನು ನರಕವಾಗಿಸುತ್ತೇವೆಂದರೆ ಅದಕ್ಕೂ ಕಾರಣ ಈ ಮನಸೇ. ಈ ಮನಸಿಗೆ ಎಷ್ಟು ಶಕ್ತಿ ಇದೆಯೆಂದರೆ  ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ ನಮಗೆ ನಾವೇ ಮಿತ್ರ ನಮಗೆ ನಾವೇ ಶತ್ರು. ನಮ್ಮನ್ನು ನಮ್ಮ ಮಿತ್ರ ಅಥವಾ ಶತ್ರುವಾಗಿ ಮಾಡಬಲ್ಲ ಶಕ್ತಿ ಮನಸು. ಅದರ ಶಕ್ತಿಯ ಬಗ್ಗೆ ಒಂದಿಷ್ಟು ಚರ್ಚಿಸೋಣ.

ಒಂದು ಆಲೋಚನೆ ಬೀಜವಿದ್ದಂತೆ. ಒಮ್ಮೆ ನೆಟ್ಟ ಬೀಜ ಬೆಳೆಯಲೇ ಬೇಕು. ಅದು ಬೆಳೆಯಲು ತಕ್ಕ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತದೆ. ಮನಸ್ಸಿಗೆ ಮೂಲವಾದ ಒಂದು ಶಕ್ತಿ ಎಂದರೆ ಅದು ಇಚ್ಚಾಶಕ್ತಿ. ಅದು  ನಮ್ಮ ಕಾರ್ಯಸಾಧನೆಗೆ ಕಾರಣ. ಅದರ ಸಕಾರಾತ್ಮಕ  ಫಲಿತಾಂಶಕ್ಕೆ ಉದಾಹರಣೆ ಎಂದರೆ ಮಾನಸಿಕ ಶಕ್ತಿಯಿಂದ ಕ್ಯಾನ್ಸರ ನಂಥ ಭಯಂಕರ ಕಾಯಿಲೆಯನ್ನು ದೇಹದಿಂದ ಓಡಿಸಿ ಆಯಸ್ಸು ಆರೋಗ್ಯವನ್ನು ಮರಳಿ ಪಡೆದವರ ಉದಾಹರಣೆ ಇದೆ.

ಹಾಗೇ ಭಯದ ಬೀಜ, ಏನೂ ಇಲ್ಲದೆ ಸಾವನ್ನು ತಂದುಕೊಟ್ಟ ಉದಾಹರಣೆಯೂ ಇದೆ. ವಿದೇಶವೊಂದರಲ್ಲಿ ಜೈಲಿನಲ್ಲಿ ಖೈದಿಗಳಿಗೆ  ನೇಣಿನ ಶಿಕ್ಷೆಗೆ  ಒಳಗದವರನ್ನು ನೇಣಿನ ಬದಲಿಗೆ ಅತ್ಯಂತ ವಿಶಯುಕ್ತವಾದ  ಸರ್ಪದ ಕೈಲಿ ಕಚ್ಚಿಸುವುದೆಂದು ತೀರ್ಮಾನಿಸಿದರು. ಎಂತಹ ಸರ್ಪವೆಂದರೆ ಅದು ಕಚ್ಚಿ ಕಾಲು ಘಂಟೆಯೊಳಗೆ ಸಾವನ್ನು  ಅಪ್ಪುತ್ತಾರೆ. ಕೈದಿಗಳನ್ನು ಕರೆದುಕೊಂಡು ಬಂದು  ಕುರ್ಚಿಯಮೇಲೆ ಕೂರಿಸಿದರು. ಕಣ್ಣಿಗೆ  ಬಟ್ಟೆ ಕಟ್ಟಿದರು…. ಆದರೆ ಅವರು ಮಾಡಿದ್ದೇನು ಗೊತ್ತೇ… ಒಂದು saftypin ನಲ್ಲಿ ಮೂರುಕಡೆ ಚುಚ್ಚಿದರು ಆದರೆ ಖೈದಿಗಳು  ಉರಿ, ನೋವು ಎಲ್ಲಾ ಅನುಭವಿಸಿ  ಹತ್ತೇ ನಿಮಿಷದಲ್ಲಿ ಪ್ರಾಣ ಬಿಟ್ಟರು. ಆದರೆ ಆಶ್ಚರ್ಯ ಎಂದರೆ ಯಾವ ಸರ್ಪದಕೈಲಿ ಕಚ್ಚಿಸುತ್ತೇನೆಂದು ಹೇಳಿದ್ದರೋ ಅದೇ ಸರ್ಪದ ವಿಷಯ ಸತ್ತವರ ದೇಹದಲ್ಲಿ ಕಂಡು ಬಂದಿತು . ಇದು ಮನಸಿನ ಶಕ್ತಿ. ಈ ಶಕ್ತಿಯನ್ನು ಮನಸು ಹೇಗೆ ಬಳಸುತ್ತದೆ , ಹೇಗೆ ಅದನ್ನು ನಮಗೆ ಸಾಧಕವಾಗಿ ಮಾಡಿಕೊಳ್ಳುವುದು ಎಂದು ಮುಂದೇನೋಡೋಣ


About The Author

Leave a Reply

You cannot copy content of this page

Scroll to Top