ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೋಲ ತುದಿಯ ಕೋಡಗನಂತೆ
 ನೇಣ ತುದಿಯ ಬೊಂಬೆಯಂತೆ
 ಆಡಿದೆನಯ್ಯ ನೀ ನಾಡಿಸಿದಂತೆ
 ನಾ ನುಡಿದೆನಯ್ಯ ನೀ ನುಡಿಸಿದಂತೆ
 ನಾ ನಿದ್ದೆನಯ್ಯ ನೀ ನಿರಿಸಿದಂತೆ
 ಜಗದ ಯಂತ್ರವಾಹಕ
 ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ
______

ಚೆನ್ನಮಲ್ಲಿಕಾರ್ಜುನನನೇ ತನ್ನ ಇಷ್ಟದ ದೈವ .ತನ್ನ ಪತಿ ಎಂದು ಭಾವಿಸಿದ ದೈವದ ಕಲ್ಪನೆ .ಇದು ಅಂದಿನ ಧರ್ಮದ ಲಿಂಗದ ಕಲ್ಪನೆಯಿಂದ ಭಿನ್ನವಾಗಿದೆ .
ಅಕ್ಕನ ಭಾವ ಪತಿ ಜ್ಯೋತಿಯ ಸ್ಥಿತಿ  ಅಷ್ಟೇ ಅಲ್ಲದೇ ಅದು ಉತ್ಕಟವಾದ ಪ್ರಾಣಾನುಭಾವ ಅಕ್ಕನದು . ಇಂಥಹ ಸಚ್ಚಿದಾನಂದ ಸಾಗರದಲ್ಲಿ ಮುಳುಗಿದ ಅಕ್ಕನವರಿಗೆ ಯಾವುದರ ಭಯ ಇರಲಾರದು .ಏಕೆಂದರೆ ಈ ಭಯ ,ಸಂಕಟ ,ನೋವು ,ಅಪಮಾನ ಎಲ್ಲದಕ್ಕೂ ನನ್ನ ಚೆನ್ನಮಲ್ಲಿಕಾರ್ಜುನನೇ ಕಾರಣ ಎನ್ನುವಳು ಅಕ್ಕ .

 ಕೋಲ ತುದಿಯ ಕೋಡಗನಂತೆ
 ನೇಣ ತುದಿಯ ಬೊಂಬೆಯಂತೆ

ತನ್ನೆಲ್ಲ ಆಗು ಹೋಗುಗಳಿಗೆ ಚೆನ್ನಮಲ್ಲಿಕಾರ್ಜುನನೇ ಕಾರಣ ಎನ್ನುವುದು ಅಕ್ಕನವರ ಭಾವ.
ಆತನ ತನ್ನ ಕರದಲ್ಲಿ ಕೋಲು ಹಿಡಿದು ಆಟ ಆಡಿಸುವ ಕೋಡುಗನಂತೆ.  ಕೈಯಲ್ಲಿ ಹಿಡಿದು ಆಡಿಸುವ ದೊಂಬರ ಆಟದಂತೆ.
ಹಾಗೇ ಆಗಿದೆ ಎನ್ನ ಮನ ಎನ್ನುವರು ಅಕ್ಕ .
ಆತ ಹೇಗೆ ಆಡಿಸುವನೋ ಹಾಗೆ ಆಡುವ ಕೋಡುಗ ಪರಿಸ್ಥಿತಿಯಂತೆ.
ಕುಣಿಸುವ ,ನಗಿಸುವ ,ಅಳಿಸುವ ಇದಕ್ಕೆಲ್ಲ ಕೋಲು ಹಿಡಿದು ಆಟ ಆಡಿಸುವ ಭಗವಂತ ಆತನೇ ನನ್ನ ಚೆನ್ನಮಲ್ಲಿಕಾರ್ಜುನ. ಆತನ ದೃಷ್ಟಿಯಲ್ಲಿ ನಾನು ಆಟ ಆಡುವ ಒಂದು ಗೊಂಬೆಯಂತೆ .
ಹಗ್ಗದ ಮೇಲೆ ನಡೆಸುವ ಗೊಂಬೆಯಂತೆ .ಆತನ ಆಣತಿಯನ್ನು ಮೀರಿ ನಡೆಯಲು ಸಾಧ್ಯವೇ ಎನ್ನುವರು ಅಕ್ಕ.
ದೇಹ ಭಾವ ಅಳಿದು ಜೀವ ಭಾವ ಉಳಿದರೇನು? ಚೆನ್ನಮಲ್ಲಿಕಾರ್ಜುನಾ ಎಲ್ಲವೂ ನಿನ್ನ ಇಚ್ಚೆಯಂತೆಯೇ .

 ಆಡಿದೆನಯ್ಯ ನೀ ನಾಡಿಸಿದಂತೆ
 ನಾ ನುಡಿದೆನಯ್ಯ ನೀ ನುಡಿಸಿದಂತೆ ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ

ಹೇ ಚೆನ್ನಮಲ್ಲಿಕಾರ್ಜುನಾ ಆಡಿದೇನು ನೀನು ಹೇಗೆ ಆಡಿಸಿದೆಯೋ, ಹಾಗೆಯೇ ಆಡಿದೆನು .ನೀನು ಹೇಗೆ ನುಡಿಸಿದೆಯೋ ಹಾಗೇ ನಾನು ನುಡಿದೆನಯ್ಯ ಚೆನ್ನಮಲ್ಲಿಕಾರ್ಜುನಾ

ಇವತ್ತಿನ ಕಾಲದಲ್ಲಿ ಏನೇ ಆಗಲೀ ಅಧಿಕಾರವೇ ಆಗಲಿ ,ಪ್ರೀತಿಯೇ ಆಗಲಿ ಸ್ನೇಹದ   ಬಲೆಯಲ್ಲಿ ,ತಮ್ಮ ಇಚ್ಚೆಯಂತೆ ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ಆಟ ಆಡಿಸುತ್ತಿರುವುದು ನಿಜಕ್ಕೂ ಶೋಚನೀಯ.ಹೀಗೆ ಆಟ ಆಡುವುದು  ಅತೀ ಹೇಯವಾದುದು ಅಲ್ಲವೇ ?

ನೀ ನುಡಿಸಿದಂತೆ ನಾ ನುಡಿದುಬಿಟ್ಟೆ  ಚೆನ್ನಮಲ್ಲಿಕಾರ್ಜುನಾ ಆವ ಜೀವ ಪಯಣದ ಪಥವೋ ನಾ ಕಾಣೆ .ತಿರುಗುವ ಈ  ಯಂತ್ರವಾಹಕ  ಜೀವ ಪಯಣದ ಚಕ್ರ ನೀನೇ ಅಲ್ಲವೇ !  ಚೆನ್ನಮಲ್ಲಿಕಾರ್ಜುನಾ. ಬದುಕು ಸಾಕೆನೆಸುವುದಕ್ಕೂ ನೀನೆ ಕಾರಣ.


About The Author

2 thoughts on “”

  1. ಅಕ್ಕಮಹಾದೇವಿಯವರ ವಚನ ವಿಶ್ಲೇಷಣೆ ತುಂಬಾ ಅರ್ಥಗರ್ಭಿತವಾಗಿದೆ

Leave a Reply

You cannot copy content of this page

Scroll to Top