ಕಾವ್ಯ ಸಂಗಾತಿ
ಭರತ್ಕುಮಾರ್ ಸಿ
ʼನಾವು’

ನಾವೆಲ್ಲಾ ಒಂದೇ….ಆದರು!
ನಮ್ಜಾತಿಯೆಂದಾಗ ಕಿವಿ ನೆಟ್ಟಗಾಗುತ್ತವೆ
ನಮ್ಕುಲದ ಕುಳಗಳ ಪರವಾದರೆ
ಕೈ ಕಾಲುಗಳು ಕಡಿಯುತ್ತವೆ
ಎಲ್ಲರುಳಿವಿಗಾಗಿ ಕೈಯ್ಯೆತ್ತಲಾರೆವಾದರೂ
ಧರುಮದ ಉಳಿವಿಗಾದರೆ ಅವರಿವರ
ನೆತ್ತರ ನೆಲಕೆ ಮುಟ್ಟಿಸಲು ಮತಿ ತೊರುವೆವು
ಬಯಸುವುದೆಲ್ಲರು ಸಿಹಿ ಬದುಕೇ
ಬೆಳಸುವುದೆಲ್ಲ ಸಿಹಿ ಬದುಕೇಯಾದರು
ಸಹಿಸುವವರಿಲ್ಲ ಅವನಿವನ ಬದುಕನು
ಇವನವನ ಬದುಕನು
ಕೊಂದರೋ? ತಾವೇ ಕೊಂದು ಕೊಂಡೆವೋ
ಸತ್ತಿದ್ದು ಸಿಹಿ ಬದುಕು
ಸಿಕ್ಕಿದ್ದು ಕಹಿ ಬದುಕು.
ಭರತ್ಕುಮಾರ್ ಸಿ..





1 thought on “ಭರತ್ಕುಮಾರ್ ಸಿ ಅವರ ಕವಿತೆ ʼನಾವು’”