ಮಾರುತೇಶ್ ಮೆದಿಕಿನಾಳ ಕವಿತೆ-ಮನಸ್ಸಿನ ಮಾಲೀಕನಾಗು
ಕಾವ್ಯ ಸಂಗಾತಿ ಮಾರುತೇಶ್ ಮೆದಿಕಿನಾಳ ಮನಸ್ಸಿನ ಮಾಲೀಕನಾಗು ಓ ಮನುಷ್ಯನೇ ನೀ ಮನಸ್ಸಿನ ಮಾಲೀಕನಾಗುಹಾಕದಿರು ನಾನಾ ತರತರದ ನಾಟಕದ ಸೋಗುವಿದ್ಯಾಬುದ್ದಿ ಸಿದ್ಧಿಸಿ ಸಾಧಿಸಿ ನೀತಿವಂತನಾಗುಸಂತ ಶರಣ ಗುರುಹಿರಿಯರಿಗೆ ಶಿರಬಾಗು! ಈ ಚಂಚಲ ಮನಸನು ಒಂದೆಡೆ ಹಿಡಿದು ನಿಲ್ಲಿಸುಇಚ್ಛೆಗಳಿಗೆ ಹುಚ್ಚೆದ್ದು ಕುಣಿಯದಂತೆ ರಮಿಸುತಡೆದು ತಾಳ್ಮೆಯಿಂದಿರಲು ರೂಢಿ ಮಾಡಿಸುಹದ್ದುಮೀರಿ ಮಾರು ಹೋಗದಂತೆ ಬುದ್ಧಿಕಲಿಸು! ದೇಹದ ಜೊತೆ ಮನಸ್ಸನ್ನು ಸೇರಿಸು ಕೂಡಿಸುಅಕ್ರಮ ಅವಗುಣಗಳ ಮೇಲೆ ಸವಾರಿ ಮಾಡಿಸುಕೆಟ್ಟಕೇಡು ಮೋಸ ವಂಚನೆಗಳ ಹೊಡೆದೋಡಿಸುಅತ್ತಿತ್ತ ಈ ಚಿತ್ತ ಓಡಾಡಬಾರದು ಹಿಡಿದು ಬಂಧಿಸು! ಪಶುಪಕ್ಷಿ ಪ್ರಾಣಿ ಪರಿಸರ ಪ್ರೀತಿಸಲಿ ಈ ಮನಸುಮನ ಕಾಣಲಿ ಸೊಗಸಾದ ದೇಶಭಕ್ತಿಯ ಕನಸುಎಲ್ಲರೊಳಗೊಂದಾಗಲಿ ಈ ಮನುಷ್ಯನ ಮನಸುಮನದ ಮಾಲೀಕನಾಗಲು ಮಾಡೋಣ ಧ್ಯಾನ ತಪಸ್ಸು! ಮಾರುತೇಶ್ ಮೆದಿಕಿನಾಳ
ಮಾರುತೇಶ್ ಮೆದಿಕಿನಾಳ ಕವಿತೆ-ಮನಸ್ಸಿನ ಮಾಲೀಕನಾಗು Read Post »









