ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ ಅವರ ಕವಿತೆ ‘ಒಲುಮೆಯ ದೀಪ’

ಹೃದಯ ಜ್ಯೋತಿ ಅರಳಲಿ
ಎದೆಯ ಕತ್ತಲೆಯು ಅಳಿಸಲಿ
ಮನದ ಹಣತೆಯು ಬೆಳಗಲಿ
ಬರಲಿ ದೀಪಾವಳಿ ಒಲುಮೆಲಿll

ಹಚ್ಚೇವು ಬೆಳಕಿನ ಹಣತೆಯ
ಎಳೆದೆವು ದೀಪಗಳ ತೇರನು
ಬಾನಲ್ಲಿ ಹೊಳೆವ ಹಗಲು ದೀಪ
ಇರುಳಲ್ಲಿ ಮಿಂಚುವ ಲಕ್ಷ ದೀಪ

ಕೋಗಿಲೆ ಗಾನದಿ ಬಂದ ದೀಪ
ಹೊಸ ಹಸಿರಿನ ಚಿಗುರು ದೀಪ
ಮೊಗ್ಗರಳಿ ಬೆಳಗಿದ ಹೂ ದೀಪ
ತಾರೆ ಮಿಂಚಿನ ಮಿಂಚು ದೀಪ

ಪರ್ವತದ ಮೇರು ಶಿಖರದಲಿ
ಹಿಮದ ಮಣಿ ಮುತ್ತಲಿ ದೀಪ
ಸೂರ್ಯ ರಶ್ಮಿಯ ಕನಕ ದೀಪ
ಬೆಳಗಲಿ ಭವ್ಯ ಭಾರತ ದೀಪ


About The Author


Comments

3 responses to “ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ ಅವರ ಕವಿತೆ ‘ಒಲುಮೆಯ ದೀಪ’”

  1.  Avatar
    Anonymous

    ದೀಪಾವಳಿ ಹಬ್ಬಕ್ಕೆ ನವ ನವೀನವಾದ ದೀಪದ ಬೆಳಕಿನ ಬಗ್ಗೆ ನಿಮ್ಮ ಕವನ ಕುರಿತು ಓದಿ ಅದ್ಭುತವೆನಿಸಿತು ಅಭಿನಂದನೆಗಳು ಮೇಡಂ ತಮಗೆ

    1.  Avatar
      Anonymous

      ತಮ್ಮ ಪ್ರೇರಣಾದಾಯಕ ನುಡಿಗಳಿಗೆ ಧನ್ಯವಾದಗಳು

  2.  Avatar
    Anonymous

    Very nice…

Leave a Reply

You cannot copy content of this page