ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಟಾಟಾ ನಿನ್ನ ಅಗಲಿಕೆಯು
ಕಂಬನಿಯ ಕಂದರಕ್ಕೆ ನೂಕಿತು
ನಿನ್ನ ಸೌಜನ್ಯದ -ಸದ್ರುಪವು
ಕಣ್ಮುಂದೆ ಮಿಂಚಿತು
ಐಶ್ವರ್ಯದ ಒಡೆಯನೇ….
ನಿನ್ನ ಸರಳ- ಸಜ್ಜನಿಕೆಯ
ವಾತ್ಸಲ್ಯದ ಸೋತ್ತಾದವರು
ಅಸಂಖ್ಯ ದೀನ- ಅನಾಥರು
ನಿನ್ನ ರಕ್ಷಣೆಯ ಕವಚದಲ್ಲಿ
ಬೆಳೆದು ಬಂದ ಪ್ರತಿಮರು…
ನಿನ್ನ ಕರುಣಾಮೃತವು ಇನ್ನಿಲ್ಲ..
ದೇಶದ ಸಕಲ ಜನಾಂಗವೆ
ನಿನ್ನ ವಾರಸದಾರರು….
ಇಡೀ ಜಗದ ಜನರ
ಕಣ್ಣಲ್ಲಿ ಉಕ್ಕಿ ಕಂಬನಿಯು
ಕಾಯುತಿರು ಪರಿಶುದ್ಧ ದರುಶನಕ್ಕೆ
ನಿಸೀಮದ ಸೀಮೆ ದಾಟಿ ನಿಂತ
ನಿನ್ನ ಅಗಲಿಕೆಯು ಕರಳು
ಕೊರೆವ ಸುದ್ದಿಯು …ಮತ್ತೆ
ಮರಳಿ ಬಾ ಭಾರತಾಂಬೆಯ
ಪುಣ್ಯ ಗರ್ಭದಿ ಹೊಸ
ಉದಯ ಹೊಮ್ಮಿದಂತೆ
ನಿರ್ವಂಚನೆಯ ಕಾಯಕಕ್ಕೆ……


About The Author

5 thoughts on “ಸವಿತಾ ದೇಶಮುಖ ರತನ್ ಟಾಟಾ ನೆನಪಿನಲ್ಲೊಂದು ಕವಿತೆ”

Leave a Reply

You cannot copy content of this page

Scroll to Top