ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದತ್ತ ಸಾಲಿಗೊಂದು ಗಝಲ್
ಬ್ರಹ್ಮನ ಹಾಳೆಯಲಿ ಒಲವಿನ ಅಕ್ಷರ ಗೀಚುತ ಬಾಳನು ಸಾಗಿಸು

ಬ್ರಹ್ಮನ ಹಾಳೆಯಲಿ ಒಲವಿನ ಅಕ್ಷರ ಗೀಚುತ ಬಾಳನು ಸಾಗಿಸು
ಅಹಮಿಕೆಯ ಕೊಳೆಯನು ತೊಳೆದು ಸಾಕ್ಷರತೆಯ ಕೊರೆದು ಬದುಕು ನೀಗಿಸು

ಊಹೆಯ ಜೀವನ ನಡೆಸದೆ ದುಡಿಮೆಗೆ ಬೆಲೆಯ ಕೊಟ್ಟರೆ ಸಾರ್ಥಕವಲ್ಲವೇ
ಕಹಿಯ ಅನುಭವ ಅಳಿಸುತ ಛಲದಲಿ ಗೆಲುವಿನ ಮೆಟ್ಟಿಲು ಬೀಗಿಸು

ಇಹದ ಪರಿವೆಯ ಮಾಡುತ ಚಿಂತೆಯ ಸಂತೆಯಲಿ ಮುಳುಗಿ ಅಳಬೇಡ
ಗಹನದಿ ವಿಷಯವ ಅರಿಯುತ ಯೋಗ್ಯ ನಿರ್ಣಯದ ಫಲವ ತೂಗಿಸು

ಕುಹಕ ನುಡಿಗಳ ಲೆಕ್ಕಿಸದೆ ಸಂತಸದ ಬಂಡಿಯ ಮುಂದೆ ದೂಡಿರು
ಸಿಹಿಯ ಕ್ಷಣಗಳು ನೆನಪಿಸುತ ದುಃಖದ ಒಡಲನು ಮರೆಯುತ ನಗಿಸು

ಸಹಾಯ ಹಸ್ತವನು ನೀಡುತ ಪ್ರೀತಿಯ ಸಂವಾದ ಬರೆಸಿಬಿಡು ಶ್ರೀಪಾದ
ದೇಹದ ಕಣಕಣದಲಿ ನಲುಮೆಯ ಪದಗಳನು ಜೋಡಿಸಿ ಮೋಹಿಸುತ ಮಾಗಿಸು


About The Author

1 thought on “ಶ್ರೀಪಾದ ಆಲಗೂಡಕರ ಅವರ ಗಜಲ್”

Leave a Reply

You cannot copy content of this page

Scroll to Top