ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

[1:11 pm, 10/10/2024] Lalita PrAbhu: ರತ್ನ ವೊಂದು ಟಾಟಾ ಹೇಳಿತು
ಭಾರತ ಮಾತೆಗೆ
ನಡೆದ ದಾರಿಯಲಿ ಪುಷ್ಪ
ಪರಿಮಳ ಬೀರಿ

ದೇಶ ಸೇವೆಗೆ ತನುಮನಧನ ಅರ್ಪಿಸಿ
ಬಡವ ಬಲ್ಲಿದರ ಕಂಬನಿ ಒರೆಸಿ
ಸಾರ್ಥಕ ಜೀವನ ನಡೆಸಿ

ದುಡಿದುಣ್ಣುವ ಜಾಗತಿಕ ನೆಲೆಗೆ
ಹಲವು ಮಾರ್ಗ ನಿಶ್ಚಯಿಸಿ
ವಿಕಾಸವ ಹರಸಿ
ನಡೆದು ತೋರಿಸಿ

ಭೀಷ್ಮ ಪ್ರತಿಜ್ಞೆ ಸ್ವೀಕರಿಸಿ
ಉತ್ತುಂಗದ ಮೆಟ್ಟಿಲೇರಿದ ನಿಮಗೆ
ಪ್ರಶಸ್ತಿ ಗೌರವಗಳೆ ತಲೆಬಾಗಿದವು
ಬಿಮ್ಮಿ
ಬೀಗಲಿಲ್ಲ ನೀವು ಬಾಗಿನಡೆದಿರಿ

ನಿಮ್ಮ ಸಾಧನೆ ಶಿಖರಕೆ
ಭಾರತಾಂಬೆಯ ಕೀರ್ತಿಯ ಬಳ್ಳಿ
ಭುವಿಯಿಂದ
ಬಾನೆತ್ತರಕೆ ಬೆಳಗಿ ಅರಳಿ

ಟಾಟಾ ಹೇಳಿದ ನಿಮ್ಮನು
ತಾಯಿಯ ಬಂಧುತ್ವದ
ಉಪ್ಪಿನಲಿ
ಉಲ್ಲಾಸ ಮನಸಿಗೆ
ಗರಂ ಗರಂ ಚಾ ಪುಡಿಯ
ಆಹ್ಲಾದಕರ ಸವಿಯ
ಸವಿನೆನಪಲಿ ನೀವೆ ರತ್ನ
ಸರಳ ಸಜ್ಜನಿಕೆಯ ಯತ್ನ
ದೇಶ ಕಂಡ ಅನರ್ಘ್ಯ ರತ್ನ
ನಿಮ್ಮ ಘನತೆ ನೆನೆವ ನನ್ನ ಕಿರು ಪ್ರಯತ್ನ.


About The Author

1 thought on “ಲಲಿತಾ ಪ್ರಭು ಅಂಗಡಿ ಅವರ ಶ್ರದ್ದಾಂಜಲಿಕವಿತೆಟಾಟಾ ರತ್ನ”

Leave a Reply

You cannot copy content of this page

Scroll to Top