ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಧುರ ಮಾತುಗಳೆಲ್ಲ ಮೌನಕ್ಕೆ ಶರಣಾದವು ಮನವೇ
ವೇದನೆಗಳ ನಿವೇದನೆಗೆ ವದನಗಳೇ ಕಾಣುತ್ತಿಲ್ಲವೆಂದರಿತು ಮನವೇ

ಭಾಂದವ್ಯಗಳು ವರ್ಣಗಳ ಪೊರೆ ಕಳಚಿ ಬಿಳಿಚಿಕೊಂಡವು
ಬೆಸುಗೆ ಬಂಧನಗಳು ನಂದನವಾಗದಿಹವೆಂದರಿತು ಮನವೇ

ನೂರು ನೋವುಗಳು ಹೆಪ್ಪುಗಟ್ಟಿದವು
ನವನೀತದಂತೆ ಕರಗುವುದಿಲ್ಲವೆಂದರಿತು ಮನವೇ

ಅರಳಿದ ಅಭೀಪ್ಸೆಗಳೆಲ್ಲ ಅಡಗಿಕೊಂಡವು
ಅನವರತ ಸ್ನೇಹದ ಹಿತ ಸಿಗುವುದಿಲ್ಲವೆಂದರಿತು ಮನವೇ

ಎದೆಯ ಧಗೆಯಲಿ ಉರಿದು ಹೊಗೆಯಾಯಿತು ನನ್ನಾತ್ಮವು
ಭ್ರಮೆಯ ಬದುಕು ದಿಟವಾಗದೆನ್ನುವ ಕಟುಸತ್ಯವನರಿತು ಮನವೇ.


About The Author

3 thoughts on “ಶೋಭಾ ಮಲ್ಲಿಕಾರ್ಜುನ್ ಅವರ ಗಜಲ್”

    1. ನಿಜವಾಗಲೂ ಮನಸ್ಸಿಗೆ ಮುದ ನೀಡಿತು ಹಾಗೆ ಬರೆಯೋದು ಮುಂದುವರೆಸಿ, fentastic

Leave a Reply

You cannot copy content of this page

Scroll to Top