ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಛಾಯಾಚಿತ್ರಗ್ರಹಣ ನನ್ನ ಹುಚ್ಚು ಹವ್ಯಾಸ
ಎಷ್ಟು ಚಿತ್ರ ತೆಗೆದರೂ ನನಗಿಲ್ಲ ಆಯಾಸ
ಸುಂದರ ಪಟಗಳ ನೋಡಿದಷ್ಟು ಉಲ್ಲಾಸ
ಕ್ಯಾಮೆರಾದಲ್ಲಿಯ ಚಿತ್ರಗಳು ಕಣ್ಣಿಗೆ ಸಂತಸ

ಬೆಚ್ಚನೆಯ ಗೂಡಲ್ಲಿ ಮಲಗಿದ ಗುಬ್ಬಿ ಮರಿ
ಬೆಟ್ಟಗಳ ನಡುವೆ ಧುಮುಕುವ ಚಿಕ್ಕ ಝರಿ
ಗರಿಗಳ ಬಿಚ್ಚಿ ನರ್ತಿಸುವ ನಾಟ್ಯ ಮಯೂರಿ
ಚೆಂದವು ಕ್ಯಾಮೆರಾದಲ್ಲಿ ಸೆರೆಯಾದ ಪರಿ

ಬಾನಂಗಳದಲ್ಲಿ ಚಿಲಿಪಿಲಿ ಹಕ್ಕಿಗಳ ಆಟ
ಹುಲ್ಲಿನ ಬಯಲಲ್ಲಿ ಕುರಿ ಹಿಂಡುಗಳ ಕೂಟ
ರಂಗು ರಂಗಿನ ಆಕರ್ಷಕ ಹೂಗಳ ತೋಟ
ಕ್ಯಾಮೆರಾದ ಸೆರೆಯಲ್ಲಿ ಸುಂದರ ನೋಟ

ಕಡಲ ತೀರದಲಿ ಮುಸ್ಸಂಜೆಯ ಸೊಬಗು
ಸೂರ್ಯೋದಯ ಸೂರ್ಯಾಸ್ತದ ಬೆರಗು
ಹಸಿರಿನ ಹೊದಿಕೆಯಲಿ ಇಳೆಯ ಬೆಡಗು
ಕ್ಯಾಮೆರಾ ಸೆರೆಯಲ್ಲಿ ಸಿಕ್ಕು ಹೆಚ್ಚಿದೆ ಮೆರಗು

ಹುಟ್ಟು ಹಬ್ಬ ಮದುವೆಯ ಆಚರಣೆಗಳು
ಅನೇಕ ಪ್ರಕಾರದ ಸಭೆ ಸಮಾರಂಭಗಳು
ಬಾಳಲ್ಲಿ ಜರುಗಿದ ಅಪರೂಪದ ಘಳಿಗೆಗಳು
ಕ್ಯಾಮೆರಾದ ಸೆರೆಯಲ್ಲಿ ಸುಂದರ ಕ್ಷಣಗಳು


About The Author

1 thought on “ಜಯಶ್ರೀ ಎಸ್ ಪಾಟೀಲರವರ ಫೋಟೋಗ್ರಾಫಿ ಢೇ!ಕವಿತೆ-“ಛಾಯಾಚಿತ್ರಗ್ರಹಣ””

Leave a Reply

You cannot copy content of this page

Scroll to Top